ದಾವಣಗೆರೆ: ದಾವಣಗೆರೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಮಹಾನಗರಪಾಲಿಕೆ ವತಿಯಿಂದ ಪಾದಚಾರಿರಸ್ತೆ (ಪುಟ್ಟಪಾತ್)ಕಾಮಗಾರಿ ಕೆಲಸ ಹಮ್ಮಿಕೊಂಡಿರುವುದರಿಂದ ಮೇ.13 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಎಂ.ಸಿ.ಸಿ.ಬಿ ಫೀಡರ್ ವ್ಯಾಪ್ತಿಯ ಸಿದ್ದವೀರಪ್ಪ ಬಡಾವಣೆ, ಎಂ.ಸಿ.ಸಿ. ಬಿ ಬ್ಲಾಕ್,ಎಸ್.ಎಸ್. ಲೇಔಟ್ ಎ. ಬ್ಲಾಕ್, ಕುವೆಂಪು ನಗರ, ಚಿಂದೋಡಿಲೀಲಾ ಕಲಾ ಕ್ಷೇತ್ರ, ಸುಕ್ಷೇಮಾ ಆಸ್ಪತ್ರೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.



