ದಾವಣಗೆರೆ: ಯರಗುಂಟೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರುಡುವ ಎಫ್15-ಕಮರ್ಷಿಯಲ್ ಮಾರ್ಗದಲ್ಲಿ ಜಲಸಿರಿ (24*7) ಶುದ್ದಕುಡಿಯುವ ನೀರು ಸರಬರಾಜು ಯೋಜನೆ ಕಾಮಗಾರಿಯನ್ನು ನಿರ್ವಹಿಸಬೇಕಾಗಿರುವುದರಿಂದ ನ.11 ರ ಗುರುವಾರ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಎಫ್15-ಕಮರ್ಷಿಯಲ್ ಫೀಡರ್: ಹಗೆದಿಬ್ಬ ಸರ್ಕಲ್, ಗಾಂಧಿನಗರ, ಅಂಬೇಡ್ಕರ್ ಸರ್ಕಲ್, ಮಹಾರಾಜ ಪೇಟೆ, ಬಸವರಾಜ ಪೇಟೆ, ಚೌಕಿಪೇಟೆ, ವಿಜಯಲಕ್ಷ್ಮೀ ರಸ್ತೆ, ದೊಡ್ಡಪೇಟೆ, ಕಾಳಿಕಾದೇವಿ ರಸ್ತೆ, ಎಸ್‍ಕೆಪಿ ರಸ್ತೆ, ಹಳೇಪೇಟೆ ವೀರಭದ್ರೇಶ್ವರ ದೇವಸ್ಥಾನದ ಸುತ್ತಮುತ್ತ ಹಾಗೂ ಇತರೆ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
ಕಾಡಜ್ಜಿ ವಿದ್ಯುತ್ ವಿತರಣಾ ಕೇಂದ್ರದ ಎಫ್-4 ಶ್ರೀರಾಮ್ ಮಾರ್ಗದಲ್ಲಿ ಮಳೆ ಗಾಳಿಗೆ ಶಿಥಿಲಗೊಂಡ ಕಂಬಗಳನ್ನು ಬದಲಾಯಿಸಲು, ಮಧ್ಯಂತರ ಕಂಬಗಳನ್ನು ಅಳವಡಿಸಲು ಮತ್ತು ಫೀಡರ್ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ನ.11 ರ ಬೆಳಿಗ್ಗೆ 10 ರಿಂದ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಎಫ್-4 ಶ್ರೀರಾಮ್ ಮಾರ್ಗದ ಗ್ರಾಮಗಳಾದ ಕಾಡಜ್ಜಿ, ನಾಗರಕಟ್ಟೆ, ರಾಂಪುರ, ಬಸವನಾಳ್, ಬಸವನಾಳ್ ಗೊಲ್ಲರಹಟ್ಟಿ, ಬೇತೂರು, ಪುಟಗನಾಳ್ ಮತ್ತು ರೆಡ್ಡಿ ಕ್ಯಾಂಪ್ ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ನಿರ್ವಹಿಸಬೇಕಾಗಿರುವುದರಿಂದ ಕಾಮಗಾರಿಗೆ ಸಂಬಂಧಿಸಿದ ಜಗಳೂರು ಕೇಂದ್ರದ ವ್ಯಾಪ್ತಿಯಲ್ಲಿ ಮತ್ತು ಸೊಕ್ಕೆ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ನೀರಾವರಿ ಪಂಪ್‍ಸೆಟ್ಟು ಮಾರ್ಗಗಳಿಗೆ ಹಾಗೂ ಎಲ್ಲಾ ಗ್ರಾಮಗಳ ಎನ್.ಜಿ.ವೈ ಮಾರ್ಗಗಳಿಗೆ ನ.11 ರ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.



