ದಾವಣಗೆರೆ: ಬೆಸ್ಕಾಂ 220 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ವಿವಿಧ ಫೀಡರ್‌ನಲ್ಲಿ ಜಲಸಿರಿ ಯೋಜನೆ ಕಾಮಗಾರಿ ಹಮ್ಮಿಕೊಳ್ಳಲಾಗಿದೆ.
ಆದ್ದರಿಂದ ಅ.21ರಂದು ಬೆಳಗ್ಗೆ 10ರಿಂದ ಸಂಜೆ 4 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ನಗರದ ಸಿಜಿಎಚ್ ಫೀಡರ್ ವ್ಯಾಪ್ತಿಯ ಎಂಸಿಸಿ ಎ ಬ್ಲಾಕ್, ನ್ಯಾಯಾಧೀಶರ ವಸತಿ ಗೃಹಗಳು, ತೋಗಟವೀರ ಕಲ್ಯಾಣ ಮಂದಿರ, ವಿನೋಬನಗರ 1ನೇ ಮುಖ್ಯ ರಸ್ತೆ ಹಾಗೂ ಸುತ್ತಮುತ್ತಲ ಪ್ರದೇಶಗಳು, ಶನೇಶ್ವರ
ಫೀಡರ್ ವ್ಯಾಪ್ತಿಯ ಜಿ.ಎಂ.ಐ.ಟಿ. ಕಾಲೇಜು, ದೇವರಾಜ ಅರಸು ಬಡಾವಣೆ, ಪೂಜಾ ಹೋಟೆಲ್, ಸಾಯಿ ಹೋಟೆಲ್, ಕೋರ್ಟ್ ಸುತ್ತಮುತ್ತ, ಗಿರಿಯಪ್ಪ ಲೇಔಟ್, ಪಿ.ಬಿ. ರಸ್ತೆ, ಸಂಗೊಳ್ಳಿ ರಾಯಣ್ಣ ಸರ್ಕಲ್, ವಾಣಿಜ್ಯ ತೆರಿಗೆ ಕಚೇರಿ, ಡೂಡಾ ಕಚೇರಿ, ಬಿಎಸ್‌ಎನ್‌ಎಲ್ ಕಚೇರಿ, ವಿನಾಯಕ ನಗರ, ಶಂಕರ್ ವಿಹಾರ್ ಬಡಾವಣೆ, ಮೋತಿ ಬೇಕರಿ ವ್ಯಾಪ್ತಿ ಪ್ರದೇಶಗಳು, ಎಫ್ -2 ಎಂಸಿಸಿ ಬಿ ಫೀಡರ್ ವ್ಯಾಪ್ತಿಯ ಸಿದ್ದವೀರಪ್ಪ ಬಡಾವಣೆ, ಬಿಐಇಟಿ ಕಾಲೇಜು, ಶಾಮನೂರು ರೋಡ್, ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.



