ದಾವಣಗೆರೆ: ಬೆಸ್ಕಾಂ 66/11 ಕೆ.ವಿ. ವಿದ್ಯುತ್ ವಿತರಣೆ ಕೇಂದ್ರದಿಂದ ಹೊರಡುವ ತ್ರಿಶೂಲ್ ಫೀಡರ್‌ನಲ್ಲಿ ಜಲಸಿರಿ ಯೋಜನೆಯಡಿ ನೀರಿನ ಸರಬರಾಜು ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಅ.18ರಂದು ಬೆಳಗ್ಗೆ 10ರಿಂದ ಸಂಜೆ 4 ಗಂಟೆವರೆಗೆ ಈ ಕೆಳಗಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಕೆ.ಬಿ.ಬಡಾವಣೆ, ಲಾಯರ್‌ರಸ್ತೆ, ದೀಕ್ಷಿತ್ ರಸ್ತೆ, ಬಿಲಾಲ್ ಕಾಂಪೌಂಡ್, ಅಶೋಕ ರಸ್ತೆ, ಕಿರುವಾಡಿ ಲೇಔಟ್, ಪ್ರೆಸ್ ಕ್ಲಬ್, ನಾಯ್ಡು ಹೋಟಲ್, ರಾಘವೇಂದ್ರ ದೇವಸ್ಥಾನ ರಸ್ತೆ
ಪಿ.ಬಿ. ರಸ್ತೆಯ (ಗಾಂಧಿ ಸರ್ಕಲ್‌ನಿಂದ ಈರುಳ್ಳಿ
ಮಾರ್ಕೆಟ್ ವರೆಗೆ) ವಿದ್ಯುತ್ ಪೂರೈಕೆಯಲ್ಲಿ
ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.