ದಾವಣಗೆರೆ: ಬೆಸ್ಕಾಂನಿಂದ 11ಕೆ.ವಿ. ಪಿ.ಜೆ.ಫೀಡರ್‌ನಲ್ಲಿ ಕೆಯುಐಡಿಎಫ್‌ಸಿ ವತಿಯಿ೦ದ 24*7 ಜಲಸಿರಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಆ.2ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4ರ ವರೆಗೆ ಈ ಏರಿಯಾದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಪೊಲೀಸ್ ಕ್ವಾಟ್ರಸ್, ತುಂಗ, ಭದ್ರ, ಸರಸ್ವತಿ, ಕೃಷ್ಣ ಬ್ಲಾಕ್, ಅರುಣಾ ಸರ್ಕಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಮೋತಿ ವೀರಪ್ಪ ಕಾಲೇಜ್ ಹಿಂಭಾಗ, ಸರ್‌ಎಂ. ವಿಶ್ವೇಶ್ವರಯ್ಯ ಪಾರ್ಕ್, ಬ್ಲಡ್ ಬ್ಯಾಂಕ್, ವಿಶ್ವಾಸ ಅಪಾರ್ಟಮೆಂಟ್, ವಿಶ್ವಾಸ ಪಾರ್ಕ್, ಎಂ.ಬಿ. ಪಾರ್ಕ್, ರಾಮ್ ಅಂಡ್ ಕೊ ಸರ್ಕಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.



