ದಾವಣಗೆರೆ: 66/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ವಿವಿಧ ಯೋಜನೆಗಳಡಿ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಜುಲೈ 31 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.ಎಫ್-9 ಪಿ.ಜೆ ಫೀಡರ್ ವ್ಯಾಪ್ತಿಯ ಪೊಲೀಸ್ ವಸತಿ ಗೃಹ, ಅರುಣಾ ಟಾಕೀಸ್ ವೃತ್ತ, ವಾಣಿ ಹೊಂಡ ಶೊ ರೂಂ, ಪಶುಸಂಗೋಪನ ಆಸ್ಪತ್ರೆ, ಪಿಸಾಳೆ ಕಾಪೌಂಡ್, ರಾಮಕೃಷ್ಣ ನರ್ಸಿಂಗ್ ಹೊಂ ಎದುರುಗಡೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು.
ಎಫ್18-ದುರ್ಗಾಂಬಿಕಾ ಫೀಡರ್ ವ್ಯಾಪ್ತಿಯ ಎಂ.ಬಿ ಕೇರಿ, ಹೊಂಡದ ಸರ್ಕಲ್ ಸುತ್ತಮುತ್ತ, ಕಾಯಿಪೇಟೆ, ಜಾಲಿನಗರ, ಟೀಚರ್ ಕಾಲೋನಿ, ಶಿವಾಜಿನಗರ, ಶಿವಾಜಿಸರ್ಕಲ್, ಚಲುವಾದಿಕೇರಿ, ಇಡಬ್ಲ್ಯೂಎಸ್ ಕಾಲೋನಿ, ಹಳೇಪೇಟೆ, ಬಾರ್‍ಲೈನ್ ರಸ್ತೆ, ಹಾಗೂ ಇತರೆ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.



