ದಾವಣಗೆರೆ; 66/11 ಕೆ.ವಿ. ದಾವಣಗೆರೆ ವಿದ್ಯುತ್ ಉಪಕೇಂದ್ರದಲ್ಲಿ ತುರ್ತುಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಎಫ್-17 ಮಾರ್ಗದಲ್ಲಿ ಜುಲೈ 16 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಮಹಾನಗರ ಪಾಲಿಕೆ ಹಳೆ ಬಸ್ ನಿಲ್ದಾಣ, ಅರುಣ ಸರ್ಕಲ್ ಕಾರ್ಪೊರೇಷನ್‍ಆಫೀಸ್, ರೇಣುಕಾ ಮಂದಿರ, ಬಡಾವಣೆ ಪೋಲಿಸ್ ಸ್ಟೇಷನ್, ರತ್ನಮ್ಮ ಹಾಸ್ಟಲ್, ಹೈಸ್ಕೂಲ್ ಮೈದಾನ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ.
ಜಗಳೂರು ವಿದ್ಯುತ್ ವಿತರಣಾ ಕೇಂದ್ರದಲ್ಲಿ ಲಿಂಕ್‍ಲೈನ್ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಜುಲೈ 16 ರಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಜಗಳೂರು ಟೌನ್ ಮತ್ತು ಎಲ್ಲಾ ಗ್ರಾಮಗಳ ಎನ್.ಜೆ.ವೈ ಮಾರ್ಗಗಳು ಮತ್ತು ನೀರಾವರಿ ಪಂಪ್‍ಸೆಟ್ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.