ದಾವಣಗೆರೆ: ನಗರದ ಪಿ.ಜೆ.ಫೀಡರ್ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಇಂದು (ಅ.05) ಬೆಳಗ್ಗೆ10 ಗಂಟೆಯಿಂದ ಸಂಜೆ 05 ರವರೆಗೆ ರಾಂ ಅಂಡ್ ಕೋ ಸರ್ಕಲ್ ಪೊಲೀಸ್ ಕ್ವಾಟ್ರಸ್, ಪಿ.ಜೆ. ಬಡಾವಣೆ, 4ನೇ ಮೇನ್, 3ನೇ ಮೇನ್, ಎಂ.ವಿ.ಪಾರ್ಕ್ ಸುತ್ತಮುತ್ತ, ರೈತರ ಬೀದಿ, ವಿಶ್ವಾಸ್ ಅಪಾರ್ಟ್‍ಮೆಂಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
ಇನ್ನು ಬಸವೇಶ್ವರ ಫೀಡರ್ ವ್ಯಾಪ್ತಿಯಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 05 ರ ವರಗೆ ಎಸ್.ಎಸ್.ಲೇಔಟ್ ಎ ಮತ್ತು ಬಿ ಬ್ಲಾಕ್, ಶಾಂತಿನಗರ, ಕುಂದುವಾಡ ರೋಡ್, ಬಸವೇಶ್ವರ ಲೇಔಟ್, ಮಹಾಲಕ್ಷ್ಮಿ ಲೇಔಟ್, ಬಾಲಾಜಿ ನಗರ, ಶಾರದಾಂಬ ವೃತ್ತ, ಇಂಡೋರ್ ಸ್ಟೇಡಿಯಂ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.