ದಾವಣಗೆರೆ: ದಾವಣಗೆರೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರುಡುವ ಎಫ್11-ಎಲ್ಎಫ್1 ಮಾರ್ಗದ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಆ.20ರ ಶನಿವಾರದಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಎಫ್11-ಎಲ್ಎಫ್1 ಫೀಡರ್ ವ್ಯಾಪ್ತಿಯ ಮಂಡಿಪೇಟೆ, ಅಶೋಕ ಟಾಕೀಸ್, ಬಿನ್ನಿ ಕಂಪನಿ ರಸ್ತೆ, ಮಹಾವೀರ, ಕೆಆರ್ ರಸ್ತೆ, , ಗಡಿಯಾರ ಕಂಬ, ಬಿಟಿ ಗಲ್ಲಿ, ಬೇಳ್ಳೂಡಿ ಗಲ್ಲಿ, ಇಸ್ಲಾಂಪೇಟೆ, ಹೆರಿಗೆ ಆಸ್ಪತ್ರೆ, ಪೋಸ್ಟ್ ಆಫೀಸ್, ರೈಲ್ವೇ ಸ್ಟೇಷನ್, ವಿಜಯಲಕ್ಷ್ಮೀ ರಸ್ತೆ ಸ್ವಲ್ಪಭಾಗ, ವಸಂತ ಟಾಕೀಸ್ ಸ್ವಲ್ಪಭಾಗ ಹಾಗೂ ಇತರೆ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ಜಗಳೂರು ಉಪವಿಭಾಗ ವ್ಯಾಪ್ತಿಯ 66 ಕೆವಿ ಹಿರೇಮಲ್ಲನಹೊಳೆ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕೆಲಸ ಹಮ್ಮಿಕೊಂಡಿರುವುದರಿಂದ ಕಾಮಗಾರಿಗೆ ಸಂಬಂಧಿಸಿದಂತೆ ಹಿರೇಮಲ್ಲನಹೊಳೆ ವಿ.ವಿ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ನೀರಾವರಿ ಪಂಪ್ಸೆಟ್ಟು ಮಾರ್ಗಗಳಿಗೆ ಹಾಗೂ ಎನ್.ಜೆ.ವೈ ಮಾರ್ಗಗಳಲ್ಲಿ ಆಗಷ್ಟ್ 20 ರಂದು ಬೆಳಿಗ್ಗೆ 10:00 ರಿಂದ ಸಂಜೆ 6:00 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.



