Connect with us

Dvgsuddi Kannada | online news portal | Kannada news online

ದಾವಣಗೆರೆ: ವಿವಿಧ ಪ್ರದೇಶದಲ್ಲಿಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

ದಾವಣಗೆರೆ

ದಾವಣಗೆರೆ: ವಿವಿಧ ಪ್ರದೇಶದಲ್ಲಿಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

ದಾವಣಗೆರೆ: ಜಗಳೂರು ಉಪ ವಿಭಾಗದ 66 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದ ಎಫ್-5 ಜಮ್ಮಾಪುರ ಮತ್ತು ಎಫ್-14 ಅರಿಶಿಣಗುಂಡಿ ಫೀಡರ್ ಗಳಿಗೆ ಸಂಬಂಧಿಸಿದಂತೆ 11 ಕೆ.ವಿ ಮಾರ್ಗದ ವಾಹಕ ಬದಲಾವಣೆ ಕೆಲಸ ಹಮ್ಮಿಕೊಂಡಿರುವುದರಿಂದ ಆ.17 ರಿಂದ ಆ.21 ರವರಗೆ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಕಾಮಗಾರಿಗೆ ಸಂಬಂಧಿಸಿದಂತೆ ಫೀಡರ್ ಗಳ ವ್ಯಾಪ್ತಿಯಲ್ಲಿ ಬರುವ ಜಗಳೂರು, ಮರೇನಹಳ್ಳಿ, ಬೊಮ್ಮಕ್ಕನಹಳ್ಳಿ, ಹೊನ್ನಮರಡಿ, ತೋರಣಗಟ್ಟ, ಮತ್ತು ಅರಿಶಿಣಗುಂಡಿ ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ ನೀರಾವರಿ ಪಂಪ್‍ಸೆಟ್ಟು ಮಾರ್ಗಗಳಿಗೆ ಹಾಗೂ ಎನ್.ಜೆ.ವೈ ಮಾರ್ಗಗಳಿಗೆ ವಿದ್ಯುತ್ ವ್ಯತ್ಯವಾಗಲಿದೆ ಎಂದು ಜಗಳೂರು ಉಪವಿಭಾಗ ಸಹಾಯಕ ಕಾರ್ಯನಿರ್ವಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

66 ಕೆ.ವಿ ಸೊಕ್ಕೆ ವಿ.ವಿ ಕೇಂದ್ರ ಮತ್ತು ಬಿಳಿಚೋಡು ವಿ.ವಿ ಕೇಂದ್ರ ಹಾಗೂ ಪಲ್ಲಾಗಟ್ಟೆ ವಿ.ವಿ ಕೇಂದ್ರಗಳಲ್ಲಿ ತ್ರೈಮಾಸಿಕ ನಿರ್ವಹಣೆ ಕೆಲಸ ಹಮ್ಮಿಕೊಂಡಿರುವುದರಿಂದ ಆ.17 ರಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಸೊಕ್ಕೆ, ಬಿಳಿಚೋಡು ಮತ್ತು ಪಲ್ಲಾಗಟ್ಟೆ ವಿ.ವಿ ಕೇಂದ್ರಗಳ ವ್ಯಾಪ್ತಿಯಲ್ಲಿ ಬರುವ ನೀರಾವರಿ ಪಂಪ್‍ ಸೆಟ್ ಮಾರ್ಗಗಳಿಗೆ ಹಾಗೂ ಎನ್.ಜೆ.ವೈ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top