ದಾವಣಗೆರೆ: ಇಂದು(ಫೆ. 13.) ಕೆ.ವಿ. ಎಸ್.ಆರ್.ಎಸ್. ದಾವಣಗೆರೆ ವಿದ್ಯುತ್ ಸ್ವೀಕರಣಾ ಕೇಂದ್ರದಿಂದ ಹೊರಡುವ ಸರಸ್ವತಿ 11 ಕೆ.ವಿ. ಫೀಡರ್‍ನಲ್ಲಿ ಕೆ.ಯು.ಐ.ಡಿ.ಎಫ್.ಸಿ. ವತಿಯಿಂದ ಹಾಗೂ 66/11ಕೆ.ವಿ. ವಿತರಣಾ ಕೇಂದ್ರ ದಾವಣಗೆರೆಯಿಂದ ಹೊರಡುವ 11ಕೆ.ವಿ. ಎಸ್.ವಿ.ಟಿ, ಎಂ.ಸಿ.ಸಿ.ಬಿ, ಬಿ.ಟಿ, ಮೌನೇಶ್ವರ, ಡಿ.ಸಿ.ಎಂ, ಜಿ ಮತ್ತು ಎಸ್ ಮತ್ತು ಕೆ.ಟಿ.ಜೆ ಫೀಡರ್‍ಗಳಲ್ಲಿ ಕ.ವಿ.ಪ್ರ.ನಿ.ನಿ ವತಿಯಿಂದ ತುರ್ತು ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಈ ಕೆಳಕಂಡ ಪ್ರದೇಶಗಳಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಎಸ್.ವಿ.ಟಿ ಫೀಡರ್ ವ್ಯಾಪ್ತಿಯ ಮಮಾಸ್ ಜಾಯಿಂಟ್‍ರಸ್ತೆ, ಎಮ್.ಸಿ.ಸಿ.ಬಿ ಬ್ಲಾಕ್, ಡೆಂಟಲ್‍ಕಾಲೇಜ್‍ರಸ್ತೆ, ಆಂಜನೇಯ ಬಡಾವಣೆ 1ನೇ ಕ್ರಾಸ್ ನಿಂದ 4ನೇ ಕ್ರಾಸ್ ವರೆಗೆ,ಯು.ಬಿ.ಡಿ.ಟಿ. ಕಾಲೇಜ್, ಡಿ.ಆರ್.ಆರ್. ಪಾಲಿಟೆಕ್ನಿಕ್, ಅನುಭವ ಮಂಟಪ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ಎಮ್.ಸಿ.ಸಿ.ಬಿ ವ್ಯಾಪ್ತಿಯ ಶಾಮನೂರು ರಸ್ತೆ, ಎಸ್.ಎಸ್. ಲೇಔಟ್, ಎ ಬ್ಲಾಕ್, ಕುವೆಂಪು ನಗರ, ಬಾಟ್ಲಿ ಬಿಲ್ಡಿಂಗ್ ಸುತ್ತ ಮುತ್ತಪ್ರದೇಶಗಳು ಸಿದ್ದವೀರಪ್ಪ ಬಡಾವಣೆ, 1ನೇ ಅಡ್ಡರಸ್ತೆ ಯಿಂದ 7ನೇ ಅಡ್ಡರಸ್ತೆವರೆಗೆ, ಗ್ಲಾಸ್ ಹೌಸ್, ಬಾಪೂಜಿ ಬ್ಯಾಂಕ್ ಸಮುದಾಯ ಭವನದ ಹಿಂಭಾಗದ ಪ್ರದೇಶ, ಬಿ.ಐ.ಇ.ಟಿ. ಕಾಲೇಜು, ಗುಂಡಿಛತ್ರದ ಸುತ್ತ ಮುತ್ತ ಹಾಗೂ ಸದ್ಯೋಜಾತ ಮಠದ ಸುತ್ತಮುತ್ತ, ಕಾಸಲ್‍ಶೆಟ್ಟಿ ಪಾರ್ಕ್ ಶಾಮನೂರು ಶಿವಶಂಕರಪ್ಪರವರ ನಿವಾಸದ ಸುತ್ತ ಮುತ್ತ ಪ್ರದೇಶಗಳು.
ಮೌನೇಶ್ವರ ಫೀಡರ್ ವ್ಯಾಪ್ತಿಯ ಹೆಚ್.ಕೆ. ಆರ್. ಸರ್ಕಲ್, ಕೆ.ಇ.ಬಿ ಕಾಲೋನಿ, ನಿಟುವಳ್ಳಿ ಹಾಗು ನಿಟುವಳ್ಳಿ ಹೊಸಬಡಾವಣೆ, ಮೌನೇಶ್ವರ ಬಡಾವಣೆ, ಸೈಯದ್ ಪೀರ್ ಬಡಾವಣೆ, ಐ.ಟಿ.ಐ. ರಿಂಗ್‍ರಸ್ತೆ ಹಾಗೂ ಸುತ್ತ ಮುತ್ತಲಿನಪ್ರದೇಶಗಳು. ಡಿ.ಸಿ.ಎಂ. ಫೀಡರ್ ವ್ಯಾಪ್ತಿಯ ಶ್ರೀರಾಮ ಬಡಾವಣೆ, ಡಿ.ಸಿ.ಎಂ.ಟೌನ್‍ಶಿಪ್, ಶಕ್ತಿನಗರ, ಅಂಬಿಕಾ ನಗರ,ಕೊಟ್ಟೂರೇಶ್ವರ ಬಡಾವಣೆ, ಜಯನಗರ, ಶೇಖರಪ್ಪಗೋಡೌನ್ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು.
ಮತ್ತು ಜಿ & ಎಸ್ ಫೀಡರ್ ವ್ಯಾಪ್ತಿಯ ಗಣೇಶ ಲೇಔಟ್, ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ, ಭಗತ್ ಸಿಂಗ್ ನಗರ,ಈರುಳ್ಳಿ ಮಾರ್ಕೆಟ್, ಪಿ.ಬಿ.ರಸ್ತೆಯ ನೀಲಮ್ಮನ ತೋಟದಿಂದ ಸುಲ್ತಾನ್‍ಗೋಲ್ಡ್ ವರೆಗೆ, ದಿಬ್ದಳ್ಳಿ ಕಾಂಪೌಂಡ್, ರೈತ ಸಂಘ, ಪದ್ಮಾಂಜಲಿ, ಪುಷ್ಪಾಂಜಲಿ, ಗೀತಾಂಜಲಿ ಟಾಕೀಸ್, ಫ್ಲೈಓವರ್ ರೈಲ್ವೇಗೇಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.



