ದಾವಣಗೆರೆ: 66/11 ಕೆ.ವಿ. ವಿತರಣಾ ಕೇಂದ್ರದಿಂದ ಹೊರಡುವ ಎಸ್.ವಿ.ಟಿ 11 ಕೆ.ವಿ. ಫೀಡರ್‍ನಲ್ಲಿ ಮತ್ತು 220 ಕೆ.ವಿ. ಸ್ವೀಕರಣಾ ಕೇಂದ್ರ, ಎಸ್.ಆರ್.ಎಸ್ ದಾವಣಗೆರೆಯಿಂದ ಹೊರಡುವ ವಿವೇಕಾನಂದ ಫಿಡರ್‍ನಲ್ಲಿ ಬೆಸ್ಕಾಂ ವತಿಯಿಂದ ತುರ್ತು ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಇಂದು (ಮಾ.24) ಬೆಳಿಗ್ಗೆ 10 ರಿಂದ 1 ಗಂಟೆಯವರೆಗೆ ವಿದ್ಯುತ್ ವ್ಯತ್ಯವಾಗಲಿದೆ.
ಎಸ್.ವಿ.ಟಿ ಫೀಡರ್ ವ್ಯಾಪ್ತಿಯ ಡೆಂಟಲ್ ಕಾಲೇಜ್ ರಸ್ತೆ, ಎಮ್.ಸಿ.ಸಿ.ಬಿ. ಬಿ ಬ್ಲಾಕ್, ಆಂಜನೇಯ ಬಡಾವಣೆ, ಮಾಮಾಸ್ ಜಾಯಿಂಟ್‍ರಸ್ತೆ ಸುತ್ತ ಮುತ್ತ ಪ್ರದೇಶಗಳು, ಶ್ರೀನಿವಾಸನಗರ 1ನೇ ಕ್ರಾಸ್ ನಿಂದ 6ನೇ ಕ್ರಾಸ್ ವರೆಗೆ, ಆದಾಯ ತೆರಿಗೆ ಕಛೇರಿ, ಅನುಭವ ಮಂಟಪ ಶಾಲೆ, ನೀರಾವರಿ ಇಲಾಖೆ, ಗ್ರಾಮಾಂತರ ಪೊಲೀಸ್‍ಠಾಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.