ಡಿವಿಜಿ ಸುದ್ದಿ, ದಾವಣಗೆರೆ: ಯರಗುಂಟೆ ವಿದ್ಯುತ್ ವಿತರಣಾ ಕೇದ್ರದಿಂದ ಹೊರುಡುವ ವಿಜಯನಗರ ಮಾರ್ಗದ ವ್ಯಾಪ್ತಿಯಲ್ಲಿ ಭೂಗತ ಕೇಬಲ್ ದುರಸ್ತಿ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ನ.04 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 4 ಗಂಟೆಯವರೆಗೆ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ವಿಜಯನಗರ ಫೀಡರ್ ವ್ಯಾಪ್ತಿಯ ದೇವರಾಜ್ ಅರಸ್ ಬಡಾವಣೆ ಬಿ ಬ್ಲಾಕ್ ಮತ್ತು ಸಿ ಬ್ಲಾಕ್, ಎಸ್‍ಪಿ ಆಫೀಸ್, ಆರ್.ಟಿ.ಓ ಆಫೀಸ್, ವಿಜಯನಗರ ಬಡಾವಣೆ, ರಾಜೀವಗಾಂಧಿ ಬಡಾವಣೆ, ಎಸ್.ಪಿ.ಎಸ್ ನಗರ 2ನೇ ಹಂತ, ಎಸ್‍ಎಮ್‍ಕೆ ನಗರ, ವಾಲ್ಮೀಕಿ ಸರ್ಕಲ್ ಸುತ್ತಮುತ್ತ ಶಿವಾಲಿ ಚಿತ್ರ ಮಂದಿರದ ಅಕ್ಕಪಕ್ಕ ಹಾಗೂ ಟೀಚರ್ಸ್ ಕಾಲೋನಿ ಇತರೆ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಇನ್ನು ಡಿಸಿಎಂ ಫೀಡರ್‍ನಲ್ಲಿ ತುರ್ತು ಕಾರ್ಯ ಹಮ್ಮಿಕೊಂಡಿರುವುದರಿಂದ ನ.04 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಡಿ.ಸಿ.ಎಂ ಫೀಡರ್ ವ್ಯಾಪ್ತಿಯ ಡಿ.ಸಿ.ಎಂ. ಟೌನ್‍ಶಿಪ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
.