ದಾವಣಗೆರೆ: ಇಂದು (ಮಾ. 16) 66/11 ಕೆ.ವಿ. ವಿ.ವಿ. ಕೇಂದ್ರ ದಾವಣಗೆರೆಯಿಂದ ಹೊರಡುವ ಡಿಸಿಎಂ ಫೀಡರ್‍ನಲ್ಲಿ ಕ.ವಿ.ಪ್ರ.ನಿ.ನಿ ವತಿಯಿಂದ ತುರ್ತು ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಡಿ.ಸಿ.ಎಂ. ಫೀಡರ್ ವ್ಯಾಪ್ತಿಯಲ್ಲಿನ ಶಕ್ತಿನಗರ, ರಾಜೇಂದ್ರ ಬಡಾವಣೆ, ಜಯನಗರ ಬಿ ಬ್ಲಾಕ್, ಬನಶಂಕರಿ ದೇವಸ್ಥಾನ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.