ದಾವಣಗೆರೆ: ನಗರದ ವಿದ್ಯಾನಗರ, ಜಯನಗರ ಫೀಡರ್‍ಗಳಲ್ಲಿ ಹಾಗೂ 220 ಕೆ.ವಿ ಎಸ್.ಆರ್.ಎಸ್. ವಿದ್ಯುತ್ ಸ್ವೀಕರಣಾ ಕೇಂದ್ರದಿಂದ ಹೊರಡುವ ಸರಸ್ವತಿ ಫೀಡರ್‍ನಲ್ಲಿ ಕ.ವಿ.ಪ್ರ.ನಿ.ನಿ ವತಿಯಿಂದ ತುರ್ತು ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಮಾ.09 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ವಿದ್ಯಾನಗರ ಫೀಡರ್ ವ್ಯಾಪ್ತಿಯ ಶಿವಕುಮಾರಸ್ವಾಮಿ ಬಡಾವಣೆ 1 ಮತ್ತು 2ನೇ ಹಂತ, ಹದಡಿ ರಸ್ತೆ, ಸೇಂಟ್ ಜಾನ್ ಸ್ಕೂಲ್, ಐ.ಟಿ.ಐ. ಕಾಲೇಜು, ರಿಂಗ್ ರಸ್ತೆ, ಶ್ರೀನಿವಾಸ ನಗರ, ತರಳಬಾಳು ಬಡಾವಣೆ ಮತ್ತು ಸುತ್ತ ಮುತ್ತ ಪ್ರದೇಶಗಳು.
ಜಯನಗರ ಫೀಡರ್ ವ್ಯಾಪ್ತಿಯ ಜಯನಗರ ಸಿ ಬ್ಲಾಕ್, ಭಗೀರಥ ಸರ್ಕಲ್, ಜಯನಗರ ಚರ್ಚ್, ಹಾಗು ಸುತ್ತ ಮುತ್ತಲಿನ ಪ್ರದೇಶಗಳು. ಸರಸ್ವತಿ ಫೀಡರ್ ವ್ಯಾಪ್ತಿಯ ಸರಸ್ವತಿ ಬಡಾವಣೆ ಎ, ಬಿ & ಸಿ ಬ್ಲಾಕ್, ಜೀವನ್ ಭೀಮಾನಗರ, ಚಿಕ್ಕಮ್ಮಣ್ಣಿ ದೇವರಾಜ್ ಅರಸ್ ಬಡಾವಣೆ, ಜಯನಗರ ಎ & ಬಿಬ್ಲಾಕ್,ಎಸ್.ಎಸ್.ಹೈಟೆಕ್ ಆಸ್ಪತ್ರೆ ರಸ್ತೆ,ಸಾಯಿ ಬಾಬ ದೇವಸ್ಥಾನದ ಸುತ್ತಮುತ್ತ ಲಕ್ಷ್ಮೀ ಬಡಾವಣೆ ಹಾಗೂ ಸುತ್ತಮತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಗ್ರಾಮೀಣ ಪ್ರದೇಶ:: ಯರಗುಂಟೆ ವಿದ್ಯುತ್ ವಿತರಣಾ ಕೇಂದ್ರದ ಪಾಲನಾ ಕೆಲಸ ಇರುವುದರಿಂದ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಯರಗುಂಟೆ, ಅಶೋಕನಗರ, ಅವರಗೊಳ್ಳ, ಕಕ್ಕರಗೊಳ್ಳ, ಕೋಡಿಹಳ್ಳಿ, ದೊಡ್ಡಬೂದಿಹಾಳ್, ಚಿಕ್ಕಬೂದಿಹಾಳ್, ದೇವರಹಟ್ಟಿ, ಬಿ.ಚಿತ್ತನಹಳ್ಳಿ, ಅಮೃತನಗರ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.



