ದಾವಣಗೆರೆ : ಡಿ.ಸಿ.ಎಂ ಫೀಡರ್ , ವಿವೇಕಾನಂದ ಫೀಡರ್‍ನಲ್ಲಿ ಹಾಗೂ ಶನೇಶ್ವರ ಫೀಡರ್‍ನಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ತುರ್ತು ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಡಿ.02 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಡಿ.ಸಿ.ಎಂ. ಫೀಡರ್ ವ್ಯಾಪ್ತಿಯ ಡಿ.ಸಿ.ಎಂ ಟೌನ್ ಶಿಪ್ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು ಶನೇಶ್ವರ ಫೀಡರ್ ವ್ಯಾಪ್ತಿಯ ಪಿಬಿ. ರಸ್ತೆ, ಸಂಗೊಳ್ಳಿ ರಾಯಣ್ಣ ಸರ್ಕಲ್, ಬಿ.ಎಸ್.ಎನ್.ಎಲ್ ಕಛೇರಿ, ಶಂಕರ್ ವಿಹಾರ್ ಬಡಾವಣೆ, ಶಾಂತಿನಗರ ಮತ್ತು ವಿನಾಯಕನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ಹಾಗೂ ವಿವೇಕಾನಂದ ಫೀಡರ್ ವ್ಯಾಪ್ತಿಯ ಆಂಜನೇಯ ಬಡಾವಣೆ 16, 17 ಮತ್ತು 18ನೇ ಕ್ರಾಸ್ , ನೂತನ್ ಕಾಲೇಜ್ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.