ದಾವಣಗೆರೆ: ಬಿಜೆಪಿಯಲ್ಲಿ ಹಿರಿಯ ನಾಯಕರಿಗೆ ಬೆಲೆ ಇಲ್ಲ. ನಮ್ಮ ಪಕ್ಕಷದಲ್ಲಿ 92 ವರ್ಷದ ನಮ್ಮ ಅಪ್ಪವರಿಗೆ ( ಶಾಮನೂರು ಶಿವಶಂಕರಪ್ಪ) ಟಿಕೆಟ್ ಕೊಟ್ಟಿದೆ. ಜತೆಗೆ ನನಗೂ ಸಹ ಟಿಕೆಟ್ ಸಿಕ್ಕಿದೆ. ಹೀಗಾಗಿ ದಾವಣಗೆರೆ ಜನ ಹಿರಿಯರಾದ ನಮ್ಮಪ್ಪರನ್ನು ಗೆಲ್ಲಿಸುವ ಮೂಲಕ ರೆಕಾರ್ಡ್ ಮಾಡಬೇಕು ಎಂದು ಮಾಜಿ ಸಚಿವ ಹಾಗೂ ದಾವಣಗೆರೆ ದಕ್ಷಿಣ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಮನವಿ ಮಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ವೀರಶೈವ ಲಿಂಗಾಯತರಿಗೆ ಬಿಜೆಪಿಯಲ್ಲಿ ನಿರೀಕ್ಷಿತ ಮಟ್ಟದ ಗೌರವ ನೀಡುತ್ತಿಲ್ಲ. ಮಾಜಿ ಮುಖ್ಯ ಮಂತ್ರಿಬಿ.ಎಸ್.ಯಡಿಯೂರಪ್ಪ ಅವರನ್ನು ಸೃಡ್ ಲೈನ್ ಮಾಡಿ, ತಾಳಕ್ಕೆ ತಕ್ಕಂತೆ ಕುಣಿಸುತ್ತಿದ್ದಾರೆ. ಲಿಂಗಾಯತರಿಗೆ ನಿರೀಕ್ಷಿತ ಮಟ್ಟದ ಗೌರವ ಸಿಗದಕ್ಕೆ ಬಿಜೆಪಿಯ ಅನೇಕ ವೀರಶೈವ ಲಿಂಗಾಯತ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಯಾಗುತ್ತಿದ್ದಾರೆ ಎಂದರು.
ಬಿಜೆಪಿಯಲ್ಲಿ ಹೆಚ್ಚಾಗಿ ಕೆಲವೇ ಜಾತಿಗಳಿಗಷ್ಟೇ ಆದ್ಯತೆ ನೀಡಲಾಗುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ಎಲ್ಲಾ ಜಾತಿಗಳಿಗೂ ಆದ್ಯತೆ ಇದೆ. ಬಿಜೆಪಿಯಲ್ಲಿ ಹಿರಿಯ ಮುಖಂಡರು ಅದರಲ್ಲೂ ವಿಶೇಷವಾಗಿ ಲಿಂಗಾಯತ ನಾಯಕರನ್ನೇ ಅಲಕ್ಷ್ಯ ಮಾಡಲಾಗುತಗತಿದೆ. ಹುಬ್ಬಳ್ಳಿಯ ಹಿರಿಯ ನಾಯಕರಾದ ಮಾಜಿ ಸಿಎಂ ಜಗದೀಶ ಶೆಟ್ಟರ್, ಬೆಳಗಾವಿ ಜಿಲ್ಲೆಯ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ವಿಚಾರದಲ್ಲಿ ಬಿಜೆಪಿ ನಡೆಯೇ ಇದಕ್ಕೆ ಸಾಕ್ಷಿ. ಶೆಟ್ಟರ್ ಹಾಗೂ ಸವದಿ ಕಾಂಗ್ರೆಸ್ ಸೇರ್ಪಡೆಯಿಂದಾಗಿ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ಅವಕಾಶ ಇದೆ. ಈ ಇಬ್ಬರ ಸೇರ್ಪಡೆಯಿಂದ ಸಿಎಂ ತವರು ಜಿಲ್ಲೆ ಹಾವೇರಿಯ ಎಲ್ಲಾ ಕ್ಷೇತ್ರಗಳ ಫಲಿತಾಂಶದ ಮೇಲೂ ಪರಿಣಾಮ ಬೀರಲಿದೆ
ಎಂದು ತಿಳಿಸಿದರು.



