ದಾವಣಗೆರೆ: ಕಾಂಗ್ರೆಸ್ ಪಕ್ಷ ನಾಯಕರಿಲ್ಲದೆ ಅನಾಥವಾದ ಕೋಣೆ, ಅಲ್ಲಿನ ಕಾರ್ಯಕರ್ತರು, ನಾಯಕರು ಕೂಡ ಅನಾಥರಾಗಿದ್ದಾರೆ. ಜನರಿಗೆ ಬಿಜೆಪಿ ಹಾಗೂ ಮೋದಿ ಮೇಲೆ ಮಾತ್ರ ಭರವಸೆ ಇದೆ ಎಂದು ಸಚಿವ ವಿ.ಸುನೀಲ್ ಕುಮಾರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಸುಳ್ಳು ಹೇಳಿ ಅದನ್ನೇ ನಿಜ ಮಾಡಲು ಹೋಗುತ್ತಿದ್ದಾರೆ. ಕಾಂಗ್ರೆಸ್ ನಲ್ಲೇ ಎಲ್ಲಾ ಭ್ರಷ್ಟರಿದ್ದು, ರಾಷ್ಟ್ರೀಯ ಅಧ್ಯಕ್ಷರಿಂದ ಹಿಡಿದು, ರಾಜ್ಯ ಅಧ್ಯಕ್ಷರವರೆಗೂ ಜಾಮೀನಿನ ಮೇಲೆ ಹೊರಗಿದ್ದಾರೆ. ಹೀಗಿದ್ದರು ಅವರು ನಮ್ಮ ಮೇಲೆ ಆರೋಪ ಮಾಡುತ್ತಾರೆ ಎಂದರು.
ಸಚಿವ ಸಂಪುಟದ ವಿಸ್ತರಣೆ, ಪುನರ್ ರಚನೆ ಮುಖ್ಯ ಮಂತ್ರಿ ಪರಮಾಧಿಕಾರ. ಮುಖ್ಯಮಂತ್ರಿಗಳಿಗೆ ಯಾವ ನಿರ್ಣಯ ತೆಗೆದುಕೊಳ್ಳಬೇಕು ಎನ್ನುವುದು ಗೊತ್ತಿದೆ. ನಾನು ಸಾಮಾನ್ಯ ಪಕ್ಷದ ಕಾರ್ಯಕರ್ತನಾಗಿದ್ದೆ. ನನ್ನನ್ನು ಚುನಾವಣೆಗೆ ನಿಲ್ಲಿಸಿ ಸಚಿವರನ್ನಾಗಿ ಮಾಡಿದೆ. ಮುಂದೆ ಕೂಡ ಪಕ್ಷ ಯಾವ ನಿರ್ಣಯ ತೆಗೆದುಕೊಳ್ಳುತ್ತದೆಯೋ ಅದಕ್ಕೆ ನಾವು ಸಿದ್ದರಿದ್ದೇವೆ ಎಂದರು.



