ದಾವಣಗೆರೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರಗೆ ಅನುಭವದ ಕೊರತೆ ಇದೆ.ಅವರಿಗೆ ಪೂಜ್ಯ ತಂದೆ ಹೆಸರು ಬಿಟ್ಟು ತಮ್ಮ ಸಾಧನೆ ಏನು ಇಲ್ಲ..?ಪಕ್ಷಕ್ಕೆ ಅನುಭವಿ ಅಧ್ಯಕ್ಷರ ಅವಶ್ಯಕತೆ ಇದೆ. ಬಸನಗೌಡ ಪಾಟೀಲ ಯತ್ನಾಳ್ ಅವರಂತಹ ಅನುಭವಿ ವ್ಯಕ್ತಿ ಅಧ್ಯಕ್ಷ ಮಾಡಿದ್ರೆ ಸೂಕ್ತ ಎಂದು ಯತ್ನಾಳ್ ಪರ ಹರಿಹರ ಶಾಸಕ ಬಿ.ಪಿ. ಹರೀಶ್ ಬ್ಯಾಟ್ ಬೀಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಜಯೇಂದ್ರ ಯಾವಾಗಲೂ ಪೂಜ್ಯ ತಂದೆಯವರು ಎಂದು ಹೇಳತ್ತಾರೆ. ಅವರು ತಮ್ಮ ತಂದೆಯವರ (ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ) ಹೆಸರು ಬಿಟ್ಟು ತಮ್ಮ ಸಾಧನೆ ಏನು ? ಎಂದು ಹೇಳಲಿ. ಹಾಗೆಯೇ ಪಕ್ಷಕ್ಕೆ ಅವರ ಕೊಡುಗೆ ಏನು ಎಂಬುದನ್ನು ತಿಳಿಸಬೇಕು.ಅನುಭವಿ, ಆಡಳಿತ ಪಕ್ಷ ಎದುರಿಸುವ ಶಕ್ತಿ ಇರುವವರು ರಾಜ್ಯಾಧ್ಯಕ್ಷರಾಗಬೇಕು. ಒಂದು ವೇಳೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದ್ರೆ ಬಸನಗೌಡ ಪಾಟೀಲ್ ಸೂಕ್ತ ಅಭ್ಯರ್ಥಿ ಎಂದರು.
ರಮೇಶ ಜಾರಕಿಹೊಳಿ ರಾಜ್ಯದಲ್ಲಿ ಓಡಾಡುವುದು ಕಷ್ಟವಾಗುತ್ತದೆ ಎಂಬ ಬೆದರಿಕೆಯ ಹೇಳಿಕೆ ನೀಡಿದ್ದೇ ಅವರಿಗೆ ಅನುಭವ ಕೊರತೆ ಇದೆ. ರಮೇಶ ಜಾರಕಿಹೊಳಿಯವರು ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ಬಿಜೆಪಿಗೆ ಬಂದವರು ಎಂಬುದನ್ನು ಅವರು ಮರೆತಿದ್ದಾರೆ ಎಂದರು.
ಡಿಸಿಎಂ ಡಿ.ಕೆ. ಶಿವಕುಮಾರ್ ವಿಜಯೇಂದ್ರ ಅವರ ಆಯ್ಕೆ ಕಾಂಗ್ರೆಸ್ ನ ಭಿಕ್ಷೆ ಎಂದು ಹೇಳಿದರೂ ವಿಜಯೇಂದ್ರ ಅದಕ್ಕೆ ಈವರೆಗೂ ಏನೂ ಉತ್ತರ ಕೊಟ್ಟಿಲ್ಲ. ಕಾಂಗ್ರೆಸ್ ಫೋರ್ಜರಿ ಸಹಿ ಮಾಡಿದ ಆರೋಪ ಮಾಡಿದೆ. ಸುಳ್ಳು ಎನ್ನಬೇಕು, ಪ್ರತಿಭಟಿಸಬೇಕು. ಸದನದಲ್ಲಿ ನಿಂದು, ನಿಮ್ಮಪ್ಪಂದು ಬಿಚ್ಚಿಡ್ತೀನಿ ಅಂತಿದ್ದಂಗೆ ಹಿಂಬಾಗಿಲಿನಿಂದ ಹೋರ ಹೋಗ್ತಾರೆ ಎಂದು ಆಕ್ರೋಶ ಹೊರಹಾಕಿದರು.



