ದಾವಣಗೆರೆ: ರಾಜ್ಯ ರಾಜಕಾರಣದಲ್ಲಿ ಡಿನ್ನರ್ ಮೀಟಿಂಗ್ ಚರ್ಚೆ ಜೋರಾದ ಹೋತ್ತಲ್ಲಿ ಜಿಲ್ಲೆಯ ಜಗಳೂರು ಶಾಸಕ ದೇವೇಂದ್ರಪ್ಪ, ರಾಜ್ಯದಲ್ಲಿ ದಲಿತ ಸಿಎಂ ಆದ್ರೆ ಖುಷಿ, ಆದರಲ್ಲೂ ಸಚಿವ ಸತೀಶ್ ಜಾರಕಿಹೊಳಿ ಸಿಎಂ ಆದರೆ ಇನ್ನೂ ಜಾಸ್ತಿ ಖುಷಿಯಾಗುತ್ತೆ ಎಂದಿದ್ದಾರೆ.
ಹರಿಹರ ತಾಲೂಕಿನ ರಾಜನಹಳ್ಳಿ ಮಾತನಾಡಿ, ರಾಜ್ಯದಲ್ಲಿ ದಲಿತ ಸಿಎಂ ಆಗುವ ಕಾಲ ಬಂದಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ನಾಯಕರೊಬ್ಬರು ರಾಜ್ಯದ ಚುಕ್ಕಾಣಿ ಹಿಡಿದರೆ ಖುಷಿ. ನಾವು ಸಹ ಕೇಳುವುದರಲ್ಲಿ ತಪ್ಪೇನೇನು ಇಲ್ಲ..? ಸತೀಶ್ ಜಾರಕಿಹೊಳಿ ಸಿಎಂ ಆದರೆ ಇನ್ನೂ ಜಾಸ್ತಿ ಖುಷಿಯಾಗುತ್ತದೆ ಎಂದು ತಿಳಿಸಿದರು.
ಸಹಜವಾಗಿಯೇ ದಲಿತರೊಬ್ಬರು ಸಿಎಂ ಆಗುತ್ತಾರೆಂದರೆ ಖುಷಿಯಾಗುತ್ತದೆ. ಅದರಲ್ಲೂ ನಮ್ಮ ಸಮುದಾಯವರೇ ಆದರೆ ಖುಷಿಯಾಗುತ್ತೆ. ಸಾಮಾಜಿಕ ನ್ಯಾಯ ಪರಿಪಾಲಿಸುವ ಕಾಂಗ್ರೆಸ್ ಹೈಕಮಾಂಡ್ ತೀರ್ಮಾನವೇ ಅಂತಿಮ. ನಾನು ಕೂಡ ವರಿಷ್ಠರ ತೀರ್ಮಾನಕ್ಕೆ ಬದ್ಧ ಎಂದಿದ್ದಾರೆ.
ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಕರೆದಿದ್ದ ಡಿನ್ನರ್ ಮುಂದೂಡುವಂತೆ ವರಿಷ್ಠರು ಸೂಚಿಸಿದ್ದು ಚರ್ಚಗೆ ಕಾರಣವಾಗಿತ್ತು. ಈಗ ಜಗಳೂರು ಶಾಸಕರು ದಲಿತ ಸಮುದಾಯವದರು ಸಿಎಂ ಆಗಬೇಕೆಂದು ಆಗ್ರಹಿಸಿದ್ದು, ಡಿಕೆಶಿ ಟೀಂ ಬಣದ ಕಣ್ಣು ಕೆಂಪಾಗಿಸಿದೆ. ಇತೀಚೆಗೆ ಜಿಲ್ಲೆಯ ಚನ್ನಗಿರಿ ಕ್ಷೇತ್ರದ ಶಾಸಕ ಶಿವಗಂಗಾ ಬಸವರಾಜ್ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಬೇಕು ಆಗ್ರಹಿಸಿದ್ದರು. ಈ ಮೂಲಕ ಜಿಲ್ಲೆಯಲ್ಲಿಯೂ ಕ ಕಾಂಗ್ರೆಸ್ ಬಣ ಬಡಿದಾಟ ಜೋರಾಗಿದೆ