ದಾವಣಗೆರೆ: ಜಿಲ್ಲಾ ರಾಜಕಾರಣದಲ್ಲಿ ಎರಡು ಕುಟುಂಬ ನಡುವೆ ಮಾತಿನ ಜಿದ್ದಾಜಿದ್ದು ನಡೆಯುತ್ತಿದೆ. ದಾವಣಗೆರೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿನ ನಂತರ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ್, ಕಾಂಗ್ರೆಸ್ ಮತ್ತು ಸ್ವಪಕ್ಷದವರ ವಿರುದ್ಧ ಕಿಡಿಕಾರಿದ್ದರು. ಈ ವಾಕ್ಸಮರ ಈಗ ವೈಯಕ್ತಿಕ ಟೀಕೆ ವರೆಗೂ ಬಂದು ನಿಂತಿದೆ.
ಕಲ್ಲೇಶ್ವರ ರೈಸ್ ಮಿಲ್‌ನಲ್ಲಿನ ಜಿಂಕೆ ಕೊಂಬು ಪತ್ತೆ ಪ್ರಕರಣದಲ್ಲಿ ಶಾಮನೂರು ಶಿವಶಂಕರಪ್ಪ ಮುಖ್ಯಮಂತ್ರಿ ಬಳಿ ಅತ್ತಿದ್ದರು ಎಂದು ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಹೇಳಿದ್ದರು. ಇದಕ್ಕೆ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಸುದ್ದಿಗಾರರ ಮಾಡಿ, ನಾವು ಅಳುವವರಲ್ಲ. ಸೆಡ್ಡು ಹೊಡೆಯುವವರು ಎಂದು ಕಿಡಿಕಾರಿದ್ದಾರೆ.
93 ವರ್ಷದ ನನಗೆ 72 ವರ್ಷದವನು ಬುದ್ಧಿ ಹೇಳಬೆಕಿಲ್ಲ. ನಮ್ಮ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಇರಬೇಕು. ನಾವು ಅವನಿಗಿಂತಲೂ ಮೊದಲು ಶ್ರೀಮಂತರು. ಭೀಮಸಮುದ್ರದಲ್ಲಿ ಅಡಕೆ ಮಾರಿ, ತೆರಿಗೆ ಕಟ್ಟದವವನು, ದಾವಣಗೆರೆಯಲ್ಲಿ ಸಂಬಂಧಿಕರ ಆಸ್ತಿ ಹೊಡೆದವನು, ಜಿಎಂಐಟಿಯಿಂದ ಬಸ್ ಶೆಲ್ಟರ್‌ಗಳನ್ನು ಮಾಡಿಸಿ ದುಡ್ಡು ಹೊಡೆದವನು. ಭೈರತಿ ಬಸವರಾಜ ಅಂತ ಮಂತ್ರಿಯೊಬ್ಬನಿಂದ ದುಡ್ಡು ವಸೂಲಿ ಮಾಡಿ ಇಬ್ಬರೂ ಹಂಚಿಕೊಳ್ಳುತ್ತಿದ್ದನು ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.
ಸೋತ ಮೇಲೆ ಅವನು ಏನೋ ಗಂಟು ಕಳೆದುಕೊಂಡಂತೆ ಅವನೇ ಅಳುತ್ತಿದ್ದಾನೆ.ಸೋಲು-ಗೆಲುವು ಸಾಮಾನ್ಯ ಎಂಬುದನ್ನು ಅವನು ತಿಳಿದುಕೊಳ್ಳಬೇಕು. ಅವನು ಮತ್ತು ಅವರಪ್ಪನನ್ನು ಭೀಮಸಮುದ್ರದಿಂದ ದಾವಣಗೆರೆಗೆ ಕರೆದುಕೊಂಡು ಬಂದಿದ್ದು ಯಾರು ಎಂಬುದನ್ನು ಮರೆತಿದ್ದಾನೆ. ನಮ್ಮ ಮೇಲೆ ಚುನಾವಣೆಯಲ್ಲಿ ಗೆದ್ದಿರುವುದು ಹೇಗೆ ಎಂದು ಕೇಸ್ ಹಾಕಿಸಿದ್ದಾನೆ. ಒಂದು ವೋಟ್‌ನಲ್ಲಿ, ಎರಡು ಲಕ್ಷ ಮತಗಳಲ್ಲಿ ಗೆದ್ದರೂ ಗೆಲುವೇ. ಅವರಪ್ಪ ಹೆಂಗೆ ಗೆದ್ದಿದ್ದಾರೆ ಎಂಬುದು ನಮಗೂ ಗೊತ್ತು.
ಎಲೆಕ್ಷನ್‌ಗೆ ದುಡ್ಡಿಲ್ಲ ಅಂತ ದುಡ್ಡು ಇಸ್ಕೊಂಡು ಬಂದಿರುವುದೂ ಗೊತ್ತು. ಕೆಲವು ಗೂಂಡಾಗಳು, ಪೈಲ್ವಾನರ ಜತೆಗೆ ಇಟ್ಟುಕೊಂಡು ಓಡಾಡುತ್ತಿದ್ದಾನೆ. ಗೂಂಡಾಗಳನ್ನು ಸಾಕಿದವನು. ನಮ್ಮ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು.ಒಂದು ಕಡೆ ಯಡಿಯೂರಪ್ಪ, ವಿಜಯೇಂದ್ರಗೆ ಬೈಯುದು. ಆಮೇಲೆ ಬೈದಿಲ್ಲ ಅನ್ನದು. ಈಗಾಗಲೇ ದಾವಣಗೆರೆಯಲ್ಲಿ ಬಿಜೆಪಿಯನ್ನು ಎರಡು ಭಾಗ ಮಾಡಿದ್ದಾನೆ. ಮುಂದೆ ನಾಲ್ಕು ಭಾಗ ಮಾಡುತ್ತಾನೆ.ಸೋತ ಮೇಲೆ ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳಬೇಕು.



