ದಾವಣಗೆರೆ: ಪಕ್ಷದ ರಾಷ್ಟ್ರೀಯ, ರಾಜ್ಯ ನಾಯಕರು ಭಯಸಿದ್ರೆ ರಾಜ್ಯ ರಾಜಕಾರಣಕ್ಕೆ ಬರಲು ಸಿದ್ಧ. ಬೇಡವೆಂದ್ರೆ ಮನೆಯಲ್ಲಿರುವುದಕ್ಕೂ ಸಿದ್ಧ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷದ ವರಿಷ್ಠರು ಲೋಕಸಭೆಯಲ್ಲಿ ಸ್ಪರ್ಧಿಸುವಂತೆ ಹೇಳಿದರೆ ಸ್ಪರ್ಧಿಸುತ್ತೇನೆ. ಹಾಗೆಯೇ ವಿಧಾನಸಭೆಗೆ ಸ್ಪರ್ಧಿಸುವಂತೆ ಹೇಳಿದ್ರೂ ಸ್ಪರ್ಧಿಸುತ್ತೇನೆ. ಇನ್ನೂ ನೀವು ಸಾಕು ಮನೆಯಲ್ಲೇ ಇರಿ ಎಂದರೂ ಅದಕ್ಕೂ ಸಿದ್ಧವಿದ್ದೇನಿ ಎಂದರು.
ನನಗೆ ಮತ್ತು ತಂದೆವರಿಗೆ ಸೇರಿ, ನಮ್ಮ ಮನೆತನಕ್ಕೆ 7 ಬಾರಿ ಎಂಪಿ ಟಿಕೆಟ್ ನೀಡಲಾಗಿದೆ. ಅರಲ್ಲಿ 6 ಬಾರಿ ಗೆದ್ದಿದ್ದೇವೆ. ಹಾಗಾಗಿ ಪಕ್ಷ, ರಾಷ್ಟ್ರ , ರಾಜ್ಯ ನಾಯಕರು ಸೂಚನೆಯಂತೆ ನಡೆದುಕೊಳ್ಳುತ್ತೇನೆ. ನನಗೆ ರಾಜ್ಯ ರಾಜಕಾರಣಕ್ಕೆ ಬರುವುದಕ್ಕೆ ಇಷ್ಟ ಇಲ್ಲ. ಆದರೆ, ಪಕ್ಷ ಸೂಚನೆಯಂತೆ ನಡೆದುಕೊಳ್ಳುತ್ತೇನೆ. ಪಕ್ಷದ ವಿರುದ್ಧ ಹೋಗಲ್ಲ ಎಂದರು.



