ಹೊನ್ನಾಳಿ: ಮಧ್ಯೆ ಕರ್ನಾಟಕ ದಾವಣಗೆರೆ ಜಿಲ್ಲೆಗೆ ಸಚಿವ ಸ್ಥಾನ ಕೈ ತಪ್ಪಿದಕ್ಕೆ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ತಮ್ಮ ಮುಂದಿನ ನಿರ್ಧಾರಕ್ಕೆ ಕಾದು ನೋಡಿ ಎಂದಿದ್ದಾರೆ.
ಇಂದು ಸಚಿವ ಸ್ಥಾನಕ್ಕೆ ಸಿಎಂ ಯಡಿಯೂರಪ್ಪ ಕಡೆಯಿಂದ ಕರೆ ಬರುವ ನಿರೀಕ್ಷೆಯಲ್ಲಿದ್ದರು. ಆದರೆ, ಸಂಜೆಯಾದರು ಕರೆ ಬಾರದ ಹಿನ್ನೆಲೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಬೆಂಗಳೂರು, ಬೆಳಗಾವಿ ಜಿಲ್ಲೆಯವರು ಮಾತ್ರ ಸಚಿವರಾಗಬೇಕಾ…? ಉಳಿದವರು ಏನು ಮಾಡಬೇಕು ಎಂದು ತೀವ್ರ ಅಸಮಾಧನಾ ಹೊರ ಹಾಕಿದ್ದಾರೆ.
ಮಧ್ಯೆ ಕರ್ನಾಟಕ, ಕಲ್ಯಾಣ ಕರ್ನಾಟಕ ಸೇರಿದಂತೆ ಅನೇಕ ಜಿಲ್ಲೆಗಳಿಗೆ ಅನ್ಯಾಯವಾಗಿದೆ. ಪ್ರದೇಶಕ ಅಸಮಾನತೆ ನಿವಾರಿಸಲು ಮಧ್ಯೆ ಕರ್ನಾಟಕಕ್ಕೆ ಸಚಿವ ಸ್ಥಾನ ಸಿಗುವ ಭರವಸೆಯಲ್ಲಿ ಇದ್ದೆವು. ಆದರೆ, ಪ್ರಯೋಜನವಾಗಿಲ್ಲ. ಇನ್ನೂ ಸಂಜೆ, ನಾಳೆ ಬೆಳಗ್ಗೆ ವರೆಗೆ ಕಾದು ನೋಡಿ, ಮುಂದಿನ ನಿರ್ಧಾರ ತಿಳಿಸುತ್ತೇನೆ ಎಂದು ಹೇಳಿದರು.



