ದಾವಣಗೆರೆ: ಶಾಮನೂರು ಶಿವಶಂಕರಪ್ಪ ನಿಧನದಿಂದ ತೆರವಾಗಿರುವ ದಾವಣಗೆರೆ ದಕ್ಷಿಣ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ದಿನಾಂಕ ಘೋಷಣೆ ಮುನ್ನೇ ಟಿಕೆಟ್ಗೆ ಕಾಂಗ್ರೆಸ್ನಲ್ಲಿ ಭಾರಿ ಪೈಪೋಟಿ ಉಂಟಾಗಿದೆ.
ಕಾಂಗ್ರೆಸ್ ಭದ್ರ ಕೋಟೆಯಾಗಿದ್ದ ದಾವಣಗೆರೆ ದಕ್ಷಿಣಕ್ಕೆ ಶಾಮನೂರು ಕುಟುಂಬಕ್ಕೆ ಟಿಕೆಟ್ ನೀಡಬೇಕು ಒಂದೆಡೆ ಚರ್ಚೆ ನಡೆಯುತ್ತಿದೆ. ಇನ್ನೊಂದೆಡೆ ಈ ಬಾರಿ ಅಲ್ಪಸಂಖ್ಯಾತರಿಗೇ (ಮುಸ್ಲಿಂ) ಟಿಕೆಟ್ ಗಿಟ್ಟಿಸಲು ಭಾರೀ ಲಾಬಿ ಶುರು ಮಾಡಿದೆ. ಇದಕ್ಕೆ ಪೂರಕ ಎನ್ನುವಂತೆ ಶಾಮನೂನು ಶಿವಶಂಕರಪ್ಪ ಬದುಕಿದ್ದಾಗ ಕೊಟ್ಟ ಮಾತನ್ನ ಉಲ್ಲೇಖಿಸಿದ ವಸತಿ ಸಚಿವ ಜಮೀರ್ ಅಹಮದ್ ಖಾನ್, ಈ ಸಲ ಮುಸ್ಲಿಂ ಸಮುದಾಯ ಪ್ರಬಲವಾಗಿ ಆಕಾಂಕ್ಷಿ ಎಂದು ತಿಳಿಸಿದ್ದಾರೆ.
ದಾವಣಗೆರೆಯ ಡಾ.ಸುರೇಶ್ ಹನಗವಾಡಿಗೆ ಪ್ರತಿಷ್ಠಿತ ‘ಪದ್ಮಶ್ರೀ’
ಇದು ನನ್ನ ಕೊನೆ ಚುನಾವಣೆ, ನನ್ನ ನಂತರ ಅಲ್ಪಸಂಖ್ಯಾತರೆಗೆ ಟಿಕೆಟ್ ಕೊಡುತ್ತೇವೆ ಎಂದು ಕಳೆದ ಬಾರಿ ಟಿಕೆಟ್ ಹಂಚಿಕೆ ಸಂದರ್ಭದಲ್ಲಿ ಶಾಮನೂರು ಶಿವಶಂಕರಪ್ಪ ಅವರು ಹೇಳಿದ್ದರು. ಅದರಂತೆ ಈ ಬಾರಿ ಅಲ್ಪಸಂಖ್ಯಾತರಿಗೆ ಆದ್ಯತೆ ಮೇರೆಗೆ ಟಿಕೆಟ್ ನೀಡಬೇಕಾಗುತ್ತದೆ ಎಂದರು. ನಾನು ಹೈ ಕಮಾಂಡ್ಗೆ ವರದಿ ಕೊಡುತ್ತೇನೆ ಎಂದ ಸಚವರು ಸುದ್ದಿಗಾರಿಗೆ ಮಾಹಿತಿ ನೀಡಿದ್ದಾರೆ.
ದಾವಣಗೆರೆ ದಕ್ಷಿಣ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡಬೇಕು ಎಂಬ ಬೇಡಿಕೆ ಇದೆ. ಅಹಿಂದ ಮುಖಂಡರಿಗೆ ಟಿಕೆಟ್ ಕೊಡಬೇಕು ಎಂಬ ಒತ್ತಾಯ ಸಹ ಕೇಳಿಬಂದಿದೆ. ಈ ಕುರಿತಂತೆ ನಾನು ಹೈ ಕಮಾಂಡ್ಗೆ ವರದಿ ಕೊಡುತ್ತೇನೆ. ಯಾರಿಗೆ ಟಿಕೆಟ್ ಕೊಡಬೇಕು ಎಂಬ ನಿರ್ಧಾರವನ್ನು ಹೈಕಮಾಂಡ್ ಮಾಡಲಿದೆ ಎಂದರು.
ಅನ್ವರ್ ಪರಿಚಯವೇ ಇಲ್ಲ
ಡ್ರಗ್ಸ್ ಕೇಸ್ನಲ್ಲಿ ಬಂಧನವಾಗಿರುವ ಅನ್ವರ್ಗೂ ನನಗೂ ಪರಿಚಯವೇ ಇಲ್ಲ. ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಮೂಲಕ ಎರಡು ವರ್ಷದ ಹಿಂದೆ ಆತನ ಪರಿಚಯವಾಗಿತ್ತು. ಎಸ್ಎಸ್ಎಂ ಅವರು ಹೇಳಿದ್ದಕ್ಕೇ ನಾನು ಅವನ ಮದುವೆ, ಗೃಹ ಪ್ರವೇಶಕ್ಕೆ ಬಂದಿದ್ದೆ, ಶಾಮನೂರು ಶಿವಶಂಕರಪ್ಪನವರು, ಎಸ್.ಎಸ್.ಮಲ್ಲಿಕಾರ್ಜುನ್ ಸಹ ಬಂದಿದ್ದರು.
-ಸಚಿವ ಜಮೀರ್ ಅಹಮದ್ ಖಾನ್
ಡ್ರಗ್ಸ್ ಪ್ರಕರಣದಲ್ಲಿ ಬಂಧನವಾಗಿರುವ ಅನ್ವರ್ಗೆ ಮುತ್ತು ಕೊಟ್ಟ ಪೋಟೋ ವೈರಲ್ ಹಿನ್ನೆಲೆ ಪ್ರತಿಕ್ರಿಯಿಸಿ, ‘ಎಲ್ಲರಿಗೂ ಮುತ್ತು ಕೊಡುವುದು ನನ್ನ ಅಭ್ಯಾಸ. ಹಾಗೇ ಅನ್ವರ್ ಭೇಟಿಯಾದಾಗಲೂ ಮುತ್ತು ಕೊಟ್ಟಿರಬಹುದು ಎಂದರು.



