ದಾವಣಗೆರೆ: ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆ ಆಡಳಿತ ಪಕ್ಷ ಬಿಜೆಪಿ ಬಸ್ ಯಾತ್ರೆ ಮಾಡಲು ನಿರ್ಧರಿಸಿದ್ದು, ರಾಜ್ಯದ 4 ದಿಕ್ಕುಗಳಿಂದ ಬಸ್ ಯಾತ್ರೆ ನಡೆಯಲಿದೆ. ದಾವಣಗೆರೆ ಬೃಹತ್ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಬಿಜೆಪಿ ಸಂಸದ ಜಿ.ಎಂ.ಸಿದ್ದೇಶ್ವರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಮಾರ್ಚ್ ಮೊದಲ ಹಾಗೂ 2ನೇ ವಾರದಲ್ಲಿ ದಾವಣಗೆರೆಯಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಕೂಡ ಆಗಮಿಸಲಿದ್ದಾರೆ. ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಹಳೇ ಮೈಸೂರು ಭಾಗ, ಕೋಲಾರ ಹೀಗೆ 4 ಕಡೆ ರಥಯಾತ್ರೆ ರೂಪದಲ್ಲಿ ಬಸ್ ಜಾತ್ರೆ ನಡೆಯಲಿದೆ. ರಾಜ್ಯದ 4 ದಿಕ್ಕುಗಳಿಂದ ಬಂದ ಯಾತ್ರೆಗಳು ದಾವಣಗೆರೆ ಸೇರಲಿವೆ. ಶೀಘ್ರವೇ ಸಮಾರೋಪ ಸಮಾವೇಶದ ಸ್ಥಳ ನಿಗದಿ ಮಾಡುತ್ತೇವೆ ಎಂದರು.



