ದಾವಣಗೆರೆ: ಮಾಯಕೊಂಡ ಠಾಣಾ ವ್ಯಾಪ್ತಿಯ ಈಚಘಟ್ಟ ಗ್ರಾಮದ ಕಲ್ಲು ಕ್ವಾರಿ ಮೇಲೆ ಪೊಲೀಸರು ದಾಳಿ ನಡೆದಿದ್ದು, ಸ್ಫೋಟಕ ವಸ್ತುಗಳು ಸಹಿತ ಒಬ್ಬನನ್ನು ಬಂಧಿಸಲಾಗಿದೆ.
ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ ಡಿವೈಎಸ್ ಪಿ ನರಸಿಂಹ ವಿ. ತಾಮ್ರಧ್ವಜ ಅವರ ನೇತೃತ್ವದಲ್ಲಿ ದಾಳಿ ನಡೆದಿದೆ. ಈಚಘಟ್ಟ ಗ್ರಾಮದ ಸರ್ವೆ ನಂಬರ್ 45/1, 45/2 ರಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಸ್ಫೋಟಕ್ಕೆ ಸಂಗ್ರಹಿಸಿದ್ದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ದಾಳಿ ವೇಳೆಯಲ್ಲಿ 60 ಜಿಲೆಟಿನ್ , ಜೀವಂತ ಎಲೆಕ್ಟ್ರಾನಿಕ್ ಸ್ಫೋಟಕ, 100 ಗ್ರಾಂ ಗನ್ ಪೌಡರ್ ಮದ್ದಿರುವ 7 ಬತ್ತಿ , ಮೂರು ಕಬ್ಬಿಣದ ರಾಡು, ಒಂದು ಸುತ್ತಿಗೆ ವಶಕ್ಕೆ ಪಡೆಯಲಾಗಿದೆ. ಕುರ್ಕಿ ವೆಂಕಟೇಶ್ವರ ಕ್ಯಾಂಪ್ ಬಾಲಕೃಷ್ಣ ಎಂಬಾತನನ್ನು ಬಂಧಿಸಲಾಗಿದೆ.
ಅಪರಾಧಿಗಳಾದ ವಿಕ್ರಮ್, ಜಯಪ್ಪ, ರಾಜಪ್ಪ, ಬಸವರಾಜಪ್ಪ, ಸಿದ್ಧಬಸಪ್ಪ ವಿರುದ್ಧ ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ದಾಳಿಯಲ್ಲಿ ದಾವಣಗೆರೆ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಬಿ. ಮಂಜುನಾಥ್, ವಿನಯ್ ಬಣಕಾರ್, ಭೂ ವಿಜ್ಞಾನಿಗಳಾದ ಮಂಜುನಾಥ್, ವಿಶ್ವನಾಥ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.



