ದಾವಣಗೆರೆ: ದಾವಣಗೆರೆ ನಗರದ ವಿನೋಬಾ ನಗರದ 2ನೇ ಮುಖ್ಯ ರಸ್ತೆಯಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ಹಾಗೂ ಚನ್ನಗಿರಿಯ ಪಟ್ಟಣದಲ್ಲಿ ಪ್ರತಿಷ್ಠಾಪಿಸಿರುವ ಹಿಂದೂ ಏಕತಾ ಗಣೇಶ ವಿಸರ್ಜನೆ ನಾಳೆ (ಸೆ.15) ನಡೆಯಲಿದೆ. ಈ ಸಂಬಂಧ ಜಿಲ್ಲಾ ಪೊಲೀಸ್ ಕಾನೂನು-ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಚನ್ನಗಿರಿ ಪಟ್ಟಣದಲ್ಲಿ ಪ್ರತಿಷ್ಠಾಪನೆ ಮಾಡಿರುವ ಹಿಂದೂ ಏಕತಾ ಗಣೇಶ ವಿಸರ್ಜನೆಯ ಮೆರವೆಣಿಗೆಯ ಮಾರ್ಗಗಳಿಗೆ ಪೊಲೀಸ್ ಎಸ್ಪಿ ಉಮಾ ಪ್ರಶಾಂತ್ ಭೇಟಿ ನೀಡಿ ಪರಿಶೀಲಿಸಿದರು. ಈ ಸಂಬಂಧ ಸಂಚಾರ ವ್ಯವಸ್ಥೆಗೆ ಯಾವುದೇ ದಕ್ಕೆಯಾಗದಂತೆ ಪರ್ಯಾಯ ಸಂಚಾರ ಮಾರ್ಗಗಳನ್ನು ಗುರುತಿಸುವುದು ಹಾಗೂ ಕಾನೂನು ಸುವ್ಯಸ್ಥೆ ಗೆ ಯಾವುದೇ ದಕ್ಕೆಯಾಗದಂತೆ ಮೆರವಣಿಗೆ ಮಾರ್ಗಗಳಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡುವ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ಸೂಕ್ತ ಸೂಚನೆಗಳನ್ನು ನೀಡಿದರು.
ಈ ಸಂಧರ್ಭದಲ್ಲಿ ಚನ್ನಗಿರಿ ಡಿವೈಎಸ್ಪಿ ಶ್ರೀ ರುದ್ರಪ್ಪ ಉಜ್ಜನಿಕೊಪ್ಪ ರವರು, ಪೊಲೀಸ್ ನಿರೀಕ್ಷಕರಾದ ಶ್ರಿ ಬಾಲಚಂದ್ರ ನಾಯ್ಕ್ ಸೇರಿದಂತೆ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು. ಚನ್ನಗಿರಿ ಪಟ್ಟಣದಲ್ಲಿನ ಹಿಂದೂ ಏಕತಾ ಗಣೇಶ ವಿಸರ್ಜನಾ ಮೆರವಣಿಗೆ ಸಂಬಂಧ ಚನ್ನಗಿರಿ ಪಟ್ಟಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಅಧಿಕಾರಿ ಸಿಬ್ಬಂದಿಗಳನ್ನು ಹಾಗೂ ಕೆ ಎಸ್ ಆರ್ ಪಿ ತುಕಡಿಗಳು, ಹಾಗೂ ಡಿಎಆರ್ ತುಕಡಿಗಳನ್ನು ನಿಯೋಜಿಸಿದ್ದು,ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಗಣೇಶ ವಿಸರ್ಜನಾ ಮೇರವಣಿಗೆ ಸಂಬಂಧ ಜಿಲ್ಲೆಯಲ್ಲಿ ಕಾನೂನು & ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸದರಿ ಮೇಲ್ಕಂಡ ಗಣೇಶ ವಿಸರ್ಜನಾ ಮೇರವಣಿಗೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಅಧಿಕಾರಿ ಸಿಬ್ಬಂದಿಗಳನ್ನು ಹಾಗು ಕೆ.ಎಸ್.ಆರ್.ಪಿ ತುಕಡಿಗಳನ್ನು & ಡಿಎಆರ್ ತುಕಡಿಗಳನ್ನು ಅಲ್ಲದೇ ಹೋಮ್ ಗಾರ್ಡ್ ಸಿಬ್ಬಂದಿಗಳನ್ನು ನಿಯೋಜಿಸಿದ್ದು, ಮೆರವಣಿಗೆ ಉದ್ದಕ್ಕೂ ಸಿಸಿಟಿವಿ ಅಳವಡಿಕೆ, ಮೆರವಣಿಗೆಯ ಸಂಪೂರ್ಣ ಚಿತ್ರಿಕರಣಕ್ಕೆ ವಿಡಿಯೋಗ್ರಾರ‍್ಸ್ ಗಳನ್ನು ನಿಯೋಜಿಸಲಾಗಿರುತ್ತದೆ ಅಲ್ಲದೇ ಮೆರವಣಿಗೆಯ ಉದ್ದಕ್ಕೂ ಡ್ರೋನ್ ಕಣ್ಗಾವಲು ಇರಿಸಲಾಗಿರುತ್ತದೆ, ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಕಾನೂನು & ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿರುತ್ತದೆ
ಮೆರವಣಿಗೆ ಮಾಡುವವರು ಪಾಲಿಸಬೇಕಾದ ಅಂಶಗಳು:
01) ಗಣೇಶ ಮೂರ್ತಿ ವಿಸರ್ಜನೆಗೆ ಈಗಾಗಲೇ ನಿಗಧಿಪಡಿಸಿದ ಮಾರ್ಗಗಳಲ್ಲಿಯೇ ಸಾಗುವುದು ಹಾಗೂ ನಿಗಧಿಪಡಿಸಿದ ಸ್ಥಳದಲ್ಲಿಯೇ ಗಣೇಶ ವಿಸರ್ಜನೆ ಮಾಡುವುದು
02) ಗಣೇಶ ವಿಸರ್ಜನಾ ಸಮಯದಲ್ಲಿ ಯಾವುದೇ ಜೀವ ಹಾನಿಯಾಗದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು ಹಾಗೂ ಈಜು ಬರುವಂತಹವರನ್ನು ಹಾಗೂ ಜೀವರಕ್ಷಕರನ್ನು (ಐiಜಿe Sಚಿveಡಿs) ನೇಮಿಸಿಕೊಳ್ಳುವುದು
03) ಗಣೇಶ ವಿಸರ್ಜನಾ ಸಂಧರ್ಭದಲ್ಲಿ ಕಾನೂನು ಸುವ್ಯವಸ್ಥೆಗೆ ದಕ್ಕೆ ತರುವಂತಹವರ ಮತ್ತು ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ನಿರ್ಧಕ್ಷಣ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು
04) ಗಣೇಶ ವಿಸರ್ಜನಾ ಸಂಬಂಧ ಜಿಲ್ಲಾ ಮಟ್ಟದಲ್ಲಿ, ಉಪ ವಿಭಾಗ ಮಟ್ಟದಲ್ಲಿ, ಠಾಣಾ ಮಟ್ಟದಲ್ಲಿ ವಿವಿಧ ಕೋಮಿನ ಮುಖಂಡರುಗಳೊAದಿಗೆ ಸಭೆ ನಡೆಸಿ ಕಾನೂನು & ಸುವ್ಯವಸ್ಥೆ ದಕ್ಕೆ ಬಾರದಂತೆ ಹಬ್ಬಗಳನ್ನು ಆಚರಿಸುವಂತೆ ಈಗಾಗಲೇ ತಿಳಿಸಲಾಗಿರುತ್ತದೆ
05) ಗಣೇಶ ಮೆರವಣಿಗೆ ಸಮಯದಲ್ಲಿ ಪ್ರಚೋಧನಕಾರಿ ಹಾಡುಗಳನ್ನು ಹಾಕುವುದು, ಪೋಸ್ಟರ್‌ಗಳನ್ನು ಪ್ರದರ್ಶಿಸುವುದಕ್ಕೆ ಅವಕಾಶ ಇರುವುದಿಲ್ಲ. ಈ ಬಗ್ಗೆ ಆಯೋಜಕರು ವಿಶೇಷ ಗಮನ ಹರಿಸುವುದು & ಸೂಕ್ತ ಕ್ರಮ ಕೈಗೊಳ್ಳುವುದು
06) ಸಾರ್ವಜನಿಕ/ಜನ ಸಂದಣಿ ಪ್ರದೇಶಗಳಲ್ಲಿ ಪಟಾಕಿಗಳನ್ನು ಸಿಡಿಸಬಾರದು. ಸುರಕ್ಷಿತ ಕ್ರಮಗಳನ್ನು ಅನುಸರಿಸುವುದು
07) ಗಣೇಶ ವಿಸರ್ಜನಾ ಮೆರವಣಿಗೆ ಸಂಧರ್ಭದಲ್ಲಿ ಮಾದಕ ವಸ್ತು ಸೇವನೆೆ, ಮದ್ಯ ಸೇವನೆ ಮಾಡಬಾರದು ಈ ಬಗ್ಗೆ ಗಣೇಶ ಮಂಡಳಿಯವರು ಜವಾಬ್ದಾರಿ ತೆಗೆದುಕೊಳ್ಳುವುದು
08) ಸಾರ್ವಜನಿಕ ಸಂಚಾರ ವ್ಯವಸ್ಥೆಗೆ ತೊಂದರೆಯಾಗದAತೆ ಗಣೇಶ ವಿಸರ್ಜನೆ ಮೆರವಣಿಗೆಯನ್ನು ನಡೆಸಬಾರದು
09) ಗಣೇಶ ವಿಸರ್ಜನಾ ಯಾವುದೇ ವಿದ್ಯುತ್ ಅವಘಡಗಳಾಗಂದAತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು. ಮೆರವಣಿಗೆ ಮಾರ್ಗಗಳಲ್ಲಿ ಬೆಳಕಿನ ವ್ಯವಸ್ಥೆಗೆ ಜನರೇಟರ್ ಗಳನ್ನು ಅಳವಡಿಸಿಕೊಳ್ಳುವುದು
10) ಗಣೇಶ ವಿಸರ್ಜನೆಯನ್ನು ಸಂಜೆ 09-00 ಗಂಟೆಯೊಳಗೆ ಮಾಡುವುದು
11) ಗಣೇಶ ವಿಸರ್ಜನಾ ಸಂಬAಧ ಶುಚಿತ್ವ ಕಾಪಾಡಿಕೊಂಡು ಪ್ರಸಾದ ವ್ಯವಸ್ಥೆಗಳನ್ನು ಮಾಡಿಕೊಳ್ಮ್ಳವುದು & ಪ್ರತಿಷ್ಠಾಪನೆ ಸ್ಥಳದಲ್ಲಿ ಹಾಗು ಮೆರವಣಿಗೆ ಸಮಯದಲ್ಲಿ ಯಾವುದೇ ಬೆಂಕಿ ಅನಾಹುತಗಳಾಗಂದAತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು
12) ಗಣೇಶ ವಿಸರ್ಜನಾ ಮೆರವಣಿಗೆ ಮಾರ್ಗಗಳಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳುವುದು
13) ಗಣೇಶ ವಿಸರ್ಜನಾ ಸಂಬAಧ ಈಗಾಗಲೇ ರೌಡಿ ಮತ್ತು ಮತೀಯ ಗೂಂಡಗಳ ಮೇಲೆ ಮುಂಜಾಗೃತ ಕ್ರಮಗಳನ್ನು ಕೈಗೊಂಡು ನಿಗಾ ಇರಿಸಲಾಗಿರುತ್ತದೆ
14) ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಕರ್ಕಶವಾದ ಶಬ್ಧವನ್ನುಂಟು ಮಾಡುವ ಸೌಂಡ್ ಸಿಸ್ಟಂ ಮತ್ತು ಡಿಜೆಗಳನ್ನು ಉಪಯೋಗಿಸಬಾರದು, ಏಕೆಂದರೆ ಮಾನ್ಯ ಘನ ನ್ಯಾಯಲಯವು ಕರ್ಕಶವಾದ ಶಬ್ಧವನ್ನುಂಟು ಮಾಡುವ ಸೌಂಡ್ ಸಿಸ್ಟಂ ಮತ್ತು ಡಿಜೆಗಳನ್ನು ನಿಷೇಧಿಸಿದ್ದು, ಉಲ್ಲಂಘಿಸಿದ್ದಲ್ಲಿ ಕಾನೂನು ರಿತ್ಯಾ ಕ್ರಮ ಕೈಗೊಳ್ಳಲಾಗುವುದು
15) ಗಣೇಶ ವಿಸರ್ಜನೆ ಮಾಡುವಾಗ ಸಾರ್ವಜನಿಕ ಆಸ್ತಿ, ಜೀವ ಹಾನಿಯಾಗದಂತೆ ಮುಂಜಾಗೃತ ಕ್ರಮಗಳನ್ನು
ಅನುಸರಿಸಬೇಕು
16) ಗಣೇಶ ವಿಸರ್ಜನಾ ಮೆರವಣಿಗೆ ಮಾರ್ಗಗಳಲ್ಲ್ಲಿ ಸ್ವಯಂ ಸೇವಕರನ್ನು ನೇಮಿಸುವುದು ಈ ಬಗ್ಗೆ ಸ್ಥಳೀಯ ಠಾಣೆಗೆ ಮಾಹಿತಿ ನೀಡುವುದು
17) ಸಾಮಾಜಿಕ ಜಾಲತಾಣಗಳಲ್ಲಿ ಕೋಮುಪ್ರಚೋದಕ ಹಾಗೂ ಧಾರ್ಮಿಕ ನಿಂದನೆ, ಸುಳ್ಳುಸುದ್ದಿ ಹರಡುವುದು, ಕಾನೂನು ಸುವ್ಯವಸ್ಥೆಗೆ ದಕ್ಕೆ ಬರುವಂತಹ ಪೋಸ್ಟ್ಗಳನ್ನು ಹಾಕುವುದಾಗಲೀ ಹಾಗು ಶೇರ್ ಮಾಡುವುದಾಗಲೀ ಕಂಡು ಬಂದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಾಲಾಗುವುದು
18) ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೇ ಶಾಂತಿಯುತವಾಗಿ ಹಾಗೂ ಸೌಹಾರ್ಧಯುತವಾಗಿ ಹಬ್ಬವನ್ನು ಆಚರಿಸುವುದು, ಯಾವುದೇ ಅಹಿತಕರ ಘಟನೆಗಳು ಕಂಡುಬAದರೆ ತುರ್ತು ಸಹಾಯವಣಿ 112 ಗೆ ಕರೆ ಮಾಡುವುದು ಹಾಗೂ ಸ್ಥಳೀಯ ಪೊಲೀಸ್ ಠಾಣೆ/ಪೊಲೀಸ್ ಅಧಿಕಾರಿ ಸಿಬ್ಬಂದಿಗಳಿಗೆ ಮಾಹಿತಿ ನೀಡಲು ಕೋರಲಾಗಿದೆ
19) ಸಾರ್ವಜನಿಕ ಸ್ಥಳಗಳಲ್ಲಿ ಅನುಮತಿ ಪಡೆಯದೇ ಯಾವುದೇ ಬ್ಯಾನರ್ & ಬಂಟಿಗ್ಸ್ಗಳನ್ನು ಹಾಕಬಾರದು
ಈ ಮೂಲಕ ಪೊಲೀಸ್ ಇಲಾಖೆ ನಾಗರೀಕರಿಗೆ ಎರಡು ಸಂದೇಶಗಳನ್ನು ನೀಡಲು ಇಚ್ಛಿಸುತ್ತದೆ- 01) ಕೋಮು ಸೌಹಾರ್ಧತೆ ಪಾಲನೆ ಮತ್ತು 02) ಜನಸ್ನೇಹಿ ಪೊಲೀಸ್ ಆಗಿ ಕರ್ತವ್ಯವನ್ನು ನಿರ್ವಹಿಸುತ್ತೇವೆ ಎಂದು ಹೇಳಲು ಹರ್ಷೀಸುತ್ತೇವೆ.