ದಾವಣಗೆರೆ: ಜಿಲ್ಲೆಯ ಹರಿಹರ ತಾಲ್ಲೂಕಿನ ಕೊಂಡಜ್ಜಿ ಗ್ರಾಮದಲ್ಲಿರುವ ಪೊಲೀಸ್ ಪಬ್ಲಿಕ್ ಶಾಲೆಗೆ (ಸಿಬಿಎಸ್ ಸಿ) ಅವಶ್ಯಕವಿರುವ ಶಿಕ್ಷಕರ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಇಂಗ್ಲಿಷ್, ವಿಜ್ಞಾನ, ಗಣಿತ, ಹಿಂದಿ, ಕಂಪ್ಯೂಟರ್ ವಿಷಯಗಳಿಗೆ ಶಿಕ್ಷಕರು ಬೇಕಾಗಿದ್ದಾರೆ.
ಸ್ನಾತಕೋತ್ತರ ಪದವಿ ಜೊತೆ B.Ed ಪಾಸಾದವರು, ಮೂರು ವರ್ಷ ಅನುಭವಿಗಳು, ಕಂಪ್ಯೂಟರ್ ಜ್ಞಾನ ಹೊಂದಿದವರು, ಮಕ್ಕಳ ಜೊತೆ ಬೆರೆಯುವ ಹಾಗೂ ಸೃಜನಶೀಲತೆ ಹೊಂದಿದವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಇದರ ಜೊತೆ ಪಾರ್ಟ್ ಟೈಮ್ ಶಿಕ್ಷಕರಾಗಿ ಡ್ಯಾನ್ಸ್, ಕರಾಟೆ, ಅಬ್ಯಾಕಸ್ ಶಿಕ್ಷಕರೂ ಅರ್ಜಿ ಸಲ್ಲಿಸಬಹುದು. ಅರ್ಹ ಅಭ್ಯರ್ಥಿಗಳು pprsdavanagere@ksp.gov.in ಇಮೇಲ್ ಗೆ ರೆಸ್ಯೂಮ್ ಕಳುಹಿಸಿ. ಹೆಚ್ಚಿನ ಮಾಹಿತಿಗೆ 8277981961, 9743936234 ಸಂಪರ್ಕಿಸಬಹುದು.