ದಾವಣಗೆರೆ: ಪೊಲೀಸ್ ಕಾನ್ ಸ್ಟೇಬಲ್ (ಪುರುಷ&ಮಹಿಳಾ, ತೃತೀಯ ಲಿಂಗ) ಹಾಗೂ ಸೇವಾ ನಿರತ& ಬ್ಯಾಕ್ ಲಾಗ್-1137-NKK ಹುದ್ದೆಗಳಿಗೆ ಇಂದು(ಫೆ. 25) ದಾವಣಗೆರೆ ನಗರದ ವಿವಿಧ 17 ಪರೀಕ್ಷಾ ಕೇಂದ್ರಗಳಲ್ಲಿ ಬೆಳಗ್ಗೆ 11-00 ಗಂಟೆಯಿಂದ 12-30 ಗಂಟೆಯವರೆಗೆ ಲಿಖಿತ ಪರೀಕ್ಷೆ ನಡೆಯಿತು.
ಜಿಲ್ಲಾ ಪೊಲೀಸ್ ವತಿಯಿಂದ ಎಲ್ಲಾ ಪರೀಕ್ಷಾ ಕೇಂದ್ರಗಳ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಒಟ್ಟು 8240 ಪರೀಕ್ಷಾ ಅಭ್ಯರ್ಥಿಗಳಲ್ಲಿ 5108 ಅಭ್ಯರ್ಥಿಗಳು ಹಾಜರಾಗಿದ್ದು, 3132 ಅಭ್ಯರ್ಥಿಗಳು ಗೈರು ಹಾಜರಾಗಿದ್ದರು. ಎಸ್ಪಿ ಉಮಾ ಪ್ರಶಾಂತ್ ಹಾಗೂ ಹೆಚ್ಚುವರಿ ಎಸ್ಪಿ ವಿಜಯಕುಮಾರ್ ಎಂ ಸಂತೋಷ್ ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.



