ದಾವಣಗೆರೆ: ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-01 ಆಗಿ ಪರಮೇಶ್ವರ ಹೆಚ್ ಇಂದು (ಜು.21) ಅಧಿಕಾರ ವಹಿಸಿಕೊಂಡರು. ಎಎಸ್ಪಿ ಜಿ ಮಂಜುನಾಥ ಅವರುಅಧಿಕಾರ ಹಸ್ತಾಂತರಿಸಿದರು.
ಎಎಸ್ಪಿ ಪರಮೇಶ್ವರ ಹೆಚ್ , ಕೆ.ಎಸ್.ಪಿ.ಎಸ್., ರವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿಯವರು. ಇವರು ಪೊಲೀಸ್ ಇಲಾಖೆಗೆ 1994 ಬ್ಯಾಚ್ ನಲ್ಲಿ ಪಿಎಸ್ಐ ಆಗಿ ಆಯ್ಕೆಯಾಗಿ ರಾಜ್ಯದ ವಿವಿಧ ಕಡೆ ಸೇವೆ ಸಲ್ಲಿಸಿರುತ್ತಾರೆ. ಡಿವೈಎಸ್ಪಿ / ಎಸಿಪಿ ಆಗಿ ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಕಮಿಷನರೇಟ್, ಉಡುಪಿ, ಬೆಂಗಳೂರು ನಗರ, ಕೆಜಿಎಫ್ ಸೇರಿದಂತೆ ವಿವಿಧ ಕಡೆ ಸೇವೆ ಸಲ್ಲಿಸಿದ್ದಾರೆ.
ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ ಉಡುಪಿ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸಿ ನಂತರ ದಾವಣಗೆರೆ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-01 ಆಗಿ ಇಂದು ವರದಿ ಮಾಡಿಕೊಂಡರು.



