ದಾವಣಗೆರೆ: ತುರ್ತು ಸ್ಪಂದನಾ ವ್ಯವಸ್ಥೆಯ ತಿಂಗಳ ಉತ್ತಮ ತುರ್ತು ಸ್ಪಂದನಾ ಅಧಿಕಾರಿ (Best Responder Of the Month ) ಪ್ರಶಸ್ತಿಗೆ ದಾವಣಗೆರೆ ಜಿಲ್ಲೆಯ 112 ಹೊಯ್ಸಳ ಸಿಬ್ಬಂದಿಗಳು ಆಯ್ಕೆಯಾಗಿದ್ದು, ಜಿಲ್ಲಾ ಪೊಲೀಸ್ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯ ಪೊಲೀಸ್, ತುರ್ತು ಸ್ಪಂದನಾ ವ್ಯವಸ್ಥೆಯ (ERSS-112) ಕಾರ್ಯ ನಿರ್ವಹಣೆಯಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿ ರಾಜ್ಯಮಟ್ಟದಲ್ಲಿ ಪ್ರತಿ ತಿಂಗಳು ಪ್ರಧಾನ ಕಚೇರಿ ಬೆಂಗಳೂರು ವತಿಯಿಂದ ನೀಡಲಾಗುವ ಉತ್ತಮ ತುರ್ತು ಸ್ಪಂದನಾ ಅಧಿಕಾರಿ (Best Responder Of the Month) ನವಂಬರ್ -2024 ರ ಉತ್ತಮ ತುರ್ತು ಸ್ಪಂದನಾ ಅಧಿಕಾರಿಯಾಗಿ ದಾವಣಗೆರೆ ಜಿಲ್ಲೆಯಲ್ಲಿ 112 ಹೊಯ್ಸಳದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿ ಸಿಬ್ಬಂದಿಗಳಾದ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಶ್ರೀ ಮಾಲತೇಶ್, ಜಿಲ್ಲಾ ಸಶಸ್ತ್ರ ಮೀಸಲು ಪಡೆ ದಾವಣಗೆರೆ ಘಟಕದ ಪೊಲೀಸ್ ಕಾನ್ ಸ್ಟೇಬಲ್ ವಿನೋದ್ ಕುಮಾರ, ದಾವಣಗೆರೆ ಜಿಲ್ಲಾ ನಿಸ್ತಂತು ವಿಭಾಗದ ಹೆಡ್ ಕಾನ್ಸ್ಟೇಬಲ್ ಸಂತೋಷ್ ಆಯ್ಕೆಯಾಗಿದ್ದು, ಡಿಜಿ & ಐಜಿಪಿ ಅಲೋಕ್ ಮೋಹನ್ ಉತ್ತಮ ತುರ್ತು ಸ್ಪಂದನಾ ಅಧಿಕಾರಿ (Best Responder Of the Month) ನವಂಬರ್ -2024 ರ ಪ್ರಶಂಸನಾ ಪತ್ರ ಹಾಗೂ ಮೇಲ್ಕಂಡ ಮೂರು 112 ಕರ್ತವ್ಯ ಪೊಲೀಸ್ ಅಧಿಕಾರಿಗಳಿಗೆ ತಲಾ 5000/- ನಗದು ಬಹುಮಾನ ನೀಡಿದ್ದಾರೆ.
ಸದರಿ ಉತ್ತಮ ತುರ್ತು ಸ್ಪಂದನಾ ಅಧಿಕಾರಿ (Best Responder Of the Month) ನವಂಬರ್ -2024 ಕ್ಕೆ ಆಯ್ಕೆಯಾದ ದಾವಣಗೆರೆ ಜಿಲ್ಲೆಯೆ ಮೇಲ್ಕಂಡ 112 ಕರ್ತವ್ಯ ಪೊಲೀಸ್ ಅಧಿಕಾರಿಗಳಿಗೆ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಎಸ್ಪಿ ಉಮಾ ಪ್ರಶಾಂತ್ ವೈಯುಕ್ತಿಕವಾಗಿ ಹಾಗೂ ಜಿಲ್ಲಾ ಪೊಲೀಸ್ ಪರವಾಗಿ ಅಭಿನಂದಿಸಿರುತ್ತಾರೆ. ಈ ಸಂಧರ್ಭದಲ್ಲಿ ಪೊಲೀಸ್ ನಿರೀಕ್ಷಕಿ ತೇಜಾವತಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.



