ದಾವಣಗೆರೆ: ಜಿಲ್ಲೆಯ ಡಿವೈಎಸ್ಪಿ ( ಸಿವಿಲ್) ವರ್ಗಾವಣೆ ವಾಗಿದ್ದು , ಈ ತಕ್ಷಣ ಜಾರಿಗೆ ಬರುವಂತೆ ವರ್ಗಾಯಿಸಿ ಆದೇಶ ಹೊರಡಿಸಲಾಗುದೆ. ನಗರ ಉಪವಿಭಾಗದ ಡಿವೈಎಸ್ಪಿ ನಾಗೇಶ್ ಐತಾಳ್ ವರ್ಗಾವಣೆಯಾಗಿದ್ದು, ನರಸಿಂಹ ತಾಮ್ರಧ್ವಜ ನೂತನ ಡಿವೈಎಸ್ಪಿಯಾಗಿದ್ದಾರೆ.
ಪಿಕೆ ಮುರಳಿಧರ್ ಸಿಐಡಿಯಿಂದ ಹಾಸನ ಜಿಲ್ಲೆಯ ಹೊಳೆನರಸೀಪುರ ವಿಭಾಗಕ್ಕೆ ವರ್ಗಾಯಿಸಲಾಗಿದೆ. ನರಸಿಂಹ ತಾಮ್ರಧ್ವಜ ಬೆಂಗಳೂರು ಪ್ರಧಾನ ಕಛೇರಿಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಇದ್ದು, ಈಗ ದಾವಣಗೆರೆ ನಗರ ಉಪವಿಭಾಗ ಡಿವೈಎಸ್ ಪಿಯಾಗಿ ವರ್ಗಾಯಿಸಲಾಗಿದೆ. ಈ ಹಿಂದೆ ದಾವಣಗೆರೆ ಗ್ರಾಮಾಂತರ ಉಪ ವಿಭಾಗದ ಡಿ ವೈ ಎಸ್ ಪಿ ಆಗಿ ಕಾರ್ಯ ನಿರ್ವಹಿಸಿದ್ದರು.ನಾಗೇಶ್ ಐತಾಳ್.ಯೂ ದಾವಣಗೆರೆ ನಗರ ಉಪ ವಿಭಾಗ, ದಾವಣಗೆರೆ ಜಿಲ್ಲೆಯಿಂದ ರಾಜ್ಯ ಗುಪ್ತವಾರ್ತೆ ಗೆ ವರ್ಗಾಯಿಸಲಾಗಿದೆ.