ದಾವಣಗೆರೆ: ಅಯೋಧ್ಯೆಯ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಇಂದು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ RAF ( Rapid Action Force) ತಂಡ ಪಥ ಸಂಚಲನ ನಡೆಸಲಾಯಿತು.
ಪಥ ಸಂಚಲನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಂಜುನಾಥ ಜಿ, ದಾವಣಗೆರೆ ನಗರ ಉಪವಿಭಾಗದ ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ, ಪೊಲೀಸ್ ನಿರೀಕ್ಷಕ ಗುರುಬಸವರಾಜ್, ಶಶಿಧರ್, ಬಾಲಚಂದ್ರನಾಯ್ಕ್, ಇಮ್ರಾನ್ ಬೇಗ್, ಆರ್ ಎಸ್ ಐ ಅಣ್ಣಿಗೇರಿ, RAF ತಂಡದ ಕಮಾಂಡೆಂಟ್ ಸುನೀಲ್ ಕುಮಾರ್ , RAF ತುಕಡಿಯ PI ಸುಂದರನ್ ರವರು RAF ಸಿಬ್ಬಂದಿಗಳು ಭಾಗವಹಿಸಿದ್ದರು.
RAF (Rapid Action Force) ತಂಡ ಪಥ ಸಂಚಲನವು ನಗರದ ಹೊಂಡದ ವೃತ್ತದಿಂದ ಆರಂಭವಾಗಿ ಚೌಕಿಪೇಟೆ, ಹಾಸಬಾವಿ ವೃತ್ತ, ಮದೀನಾ ಆಟೋ ಸ್ಟ್ಯಾಂಡ್, ಬೇತೂರ್ ರಸ್ತೆ, ಕೆ ಆರ್ ರಸ್ತೆ, ಮಂಡಿಪೇಟೆ ರಸ್ತೆ, ಕೆ ಆರ್ ಮಾರ್ಕೇಟ್, ಇಸ್ಲಾಂ ಪೇಟೆ, ಪಿ ಬಿ ರಸ್ತೆ, ಶಿವಪ್ಪ ಸರ್ಕಲ್, ದುರ್ಗಾಂಬಿಕಾ ದೇವಸ್ಥಾನ, ಹೆಚ್ ಕೆ ಆರ್ ಸರ್ಕಲ್ ಮೂಲಕ ಸಾಗಿ ಕೆಟಿಜೆ ನಗರ ಪೊಲೀಸ್ ಠಾಣೆಗೆ ನಡೆಸಲಾಯಿತು.



