ದಾವಣಗೆರೆ: ಜಿಲ್ಲಾ ಪೊಲೀಸ್ ವತಿಯಿಂದ ರಸ್ತೆ ಸುರಕ್ಷಾ ಸಪ್ತಾಹ 2024 ರ ಸಮಾರೋಪ ಸಮಾರಂಭವನ್ನು ದಾವಣಗೆರೆ ನಗರದ ರೇಣುಕಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು. ರಸ್ತೆ ಸುರಕ್ಷಾ ಸಪ್ತಾಹ 2024 ರ ಅಂಗವಾಗಿ ಶಾಲಾ ವಿಧ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿದ್ದು, ವಿಜೇತರಾದ ವಿಧ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗು ಬಹುಮಾನ ವಿತರಿಸಲಾಯಿತು.
ಕಾರ್ಯಾಕ್ರಮದಲ್ಲಿ ಪೊಲೀಸ್ ಅಧೀಕ್ಷಕ ಉಮಾ ಪ್ರಶಾಂತ್, ಆರ್ ಟಿ ಓ ಪ್ರಮುತೇಶ್ , ನಗರ ಡಿವೈಸ್ಪಿ ಮಲ್ಲೇಶ್ ದೊಡ್ಮನಿ , ಪೊಲೀಸ್ ನಿರೀಕ್ಷಕ ಮಂಜುನಾಥ, ಶಶಿಧರ, ಪ್ರಭಾವತಿ ಶೇತಸನಧಿ, ಮಲ್ಲಮ್ಮ ಚೌಬೆ, ಇಮ್ರಾನ್ ಬೇಗ್, ಪಿಎಸ್ಐ ಶೈಲಜಾ, ಜಯಪ್ರಕಾಶ್, ನಿರ್ಮಲ, ಲಾರಿ ಅಸೋಶಿಯೇಷನ್ ಅಧ್ಯಕ್ಷ ಸೈಫುಲ್ಲಾ ಹಾಗೂ ದಾವಣಗೆರೆ ಜಿಲ್ಲಾ ಸ್ಕೌಟ್ಸ್ & ಗೈಡ್ಸ್ನ ಜಿಲ್ಲಾ ಅಸಿಸ್ಟಂಟ್ ಕಮಿಷನರ್ ಕೊಟ್ರೇಶ್ ಸೇರಿದಂತೆ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.



