ದಾವಣಗೆರೆ: ನಗರದ ಪಿಜೆ ಬಡಾವಣೆಯಲ್ಲಿ 15 ಗ್ರಾಂ ಚಿನ್ನ ಹಾಗೂ 2,508 ರೂಪಾಯಿ ನಗದು ಒಳಗೊಂಡ ಪರ್ಸ್ ಅನ್ನು ಪೊಲೀಸರಿಗೆ ಒಪ್ಪಿಸಿದ ಆಟೋ ಚಾಲಕ ಜಗದೀಶ್ ಆರ್. ಟಿ ಅವರಿಗೆ ಎಸ್ ಪಿ ಪ್ರಶಂಸನೀಯ ಪತ್ರ ನೀಡಿ ಗೌರವಿಸಿದ್ದಾರೆ.
ಪಿಜೆ ಬಡಾವಣೆಯ 7ನೇ ಮುಖ್ಯ ರಸ್ತೆಯಲ್ಲಿ ಮಾರ್ಚ್ 25 ರಂದು ಆಟೋ ಚಾಲಕ ಜಗದೀಶ್ ಆರ್.ಟಿ ಅವರಿಗೆ ಪರ್ಸ್ ಒಂದು ಸಿಕ್ಕಿತ್ತು. ಚಿನ್ನ, ಹಣ ಇದ್ದರೂ ತಮಗೆ ಸಿಕ್ಕ ಪರ್ಸ್ ಅನ್ನು ಪ್ರಮಾಣಿಕವಾಗಿ ಪೊಲೀಸರಿಗೆ ಒಪ್ಪಿಸಿದ್ದರು. ಜಗದೀಶ್ ಅವರ ಪ್ರಮಾಣಿಕತೆಗೆ ಎಸ್ ಪಿ ಹನುಮಂತರಾಯ ಪ್ರಶಂಸನೀಯ ಪತ್ರ ನೀಡಿ ಅಭಿನಂದಿಸಿದರು.