ದಾವಣಗೆರೆ: ಶೇ.50ರಷ್ಟು ರಿಯಾಯಿತಿ ದರದಲ್ಲಿ ಸಂಚಾರಿ ನಿಯಮ ಉಲ್ಲಂಘನೆಯ ದಂಡ ಪಾವತಿಗೆ ಇಂದೇ (ಸೆ.9) ಕೊನೆ ದಿನವಾಗಿದೆ. ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ವಾಹನಗಳ ಮೇಲೆ ಪೊಲೀಸ್ ಇಲಾಖೆಯಿಂದ ಸಂಚಾರಿ ಇ-ಚಲನ್‌ಗಳ ಮೂಲಕ ದಾಖಲಿಸಿದ ಪ್ರಕರಣಗಳನ್ನು ಇತ್ಯಾರ್ಥಪಡಿಸುವ ಬಗ್ಗೆ ಮತ್ತೊಂದು ಬಾರಿಗೆ ಶೇಕಡಾ 50% ರಷ್ಟು ರಿಯಾಯತಿಯನ್ನು ಸರ್ಕಾರ ದಿನಾಂಕ :05-07-2023 ರಲ್ಲಿ ಘೋಷಣೆ ಮಾಡಿತ್ತು.
ದಾವಣಗೆರೆ ಜಿಲ್ಲೆಯಲ್ಲಿ ದಿನಾಂಕ :11-02-2023 ಕ್ಕಿಂತ ಪೂರ್ವದಲ್ಲಿ ದಾಖಲಾಗಿದ್ದ ಪ್ರಕರಣಗಳ ಪೈಕಿ ಒಟ್ಟು 1,03,429 ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳು ದಂಡ
ಪಾವತಿಯಾಗದೇ ಬಾಕಿ ಇರುತ್ತವೆ. ದಿನಾಂಕ :11-02-2023 ಕ್ಕಿಂತ ಪೂರ್ವದಲ್ಲಿ ದಾಖಲಾದ ಪ್ರಕರಣಗಳಿಗೆ ಮಾತ್ರ ಶೇ 50% ರಿಯಾಯತಿ ಲಭ್ಯವಿದ್ದು,ರಿಯಾಯತಿಗೆ ನಿಗಧಿಪಡಿಸಿದ ದಿನಾಂಕ : 09-09-2023 ಕೊನೆಗೊಳ್ಳುವುದರಿಂದ ಸಾರ್ವಜನಿಕರು ಈ ರಿಯಾಯತಿ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು.
ನಿಗದಿತ ಅವಧಿಯಲ್ಲಿ ತಮ್ಮ ವಾಹನಗಳ ಮೇಲೆ ದಾಖಲಾಗಿರುವ ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳನ್ನು ಸರ್ಕಾರದ
ಆದೇಶದನ್ವಯ ಶೇಕಡಾ 50% ರಷ್ಟು ರಿಯಾಯ್ತಿ ದರದಲ್ಲಿ ಆನ್‌ಲೈನ್ ಸೇವಾ ಕೇಂದ್ರಗಳಾದ ದಾವಣಗೆರೆ, ಕರ್ನಾಟಕ ಹಾಗೂ ದಾವಣಗೆರೆ ದಕ್ಷಿಣ ಸಂಚಾರ ಪೊಲೀಸ್ ಠಾಣೆ & ಉತ್ತರ ಸಂಚಾರ ಪೊಲೀಸ್ ಠಾಣೆಗಳಲ್ಲಿ ಪಾವತಿಸಿಕೊಳ್ಳಲು ಕೋರಿದೆ.