Connect with us

Dvgsuddi Kannada | online news portal | Kannada news online

ದಾವಣಗೆರೆ: ಜಿಲ್ಲಾ ಪೊಲೀಸ್ ವತಿಯಿಂದ ಡ್ರಗ್ಸ್, ಮಾದಕ ವಸ್ತುಗಳ ಜಾಗೃತಿಗೆ 10ಕೆ, 5ಕೆ ಮೆರಾಥಾನ್ ; ಪ್ರಥಮ ಬಹುಮಾನ 10 ಸಾವಿರ

IMG 20240307 WA0004 scaled

ದಾವಣಗೆರೆ

ದಾವಣಗೆರೆ: ಜಿಲ್ಲಾ ಪೊಲೀಸ್ ವತಿಯಿಂದ ಡ್ರಗ್ಸ್, ಮಾದಕ ವಸ್ತುಗಳ ಜಾಗೃತಿಗೆ 10ಕೆ, 5ಕೆ ಮೆರಾಥಾನ್ ; ಪ್ರಥಮ ಬಹುಮಾನ 10 ಸಾವಿರ

ದಾವಣಗೆರೆ: ಕರ್ನಾಟಕ ರಾಜ್ಯ ಪೊಲೀಸ್ 50ನೇ ವರ್ಷದ ಸುವರ್ಣ ಮಹೋತ್ಸವ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಡ್ರಗ್ಸ್ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ದಾವಣಗೆರೆ ಜಿಲ್ಲಾ ಪೊಲೀಸ್ ವತಿಯಿಂದ ಎಸ್ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಮಾ.10 ರಂದು ನಗರದಲ್ಲಿ 10ಕೆ ಹಾಗೂ 5ಕೆ ಮೆರಾಥಾನ್ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.

ಈ ಮೆರಾಥಾನ್ ನಲ್ಲಿ ಪೊಲೀಸರೊಂದಿಗೆ ನಾಗರಿಕರು ಸಹ ಸ್ವ-ಹಿತಾಸಕ್ತಿಯಿಂದ ಪಾಲ್ಗೊಳ್ಳಲು ಅವಕಾಶವಿರುತ್ತದೆ. ಮೆರಾಥಾನ್ ಓಟದ ಸ್ಪರ್ಧೆಯಲ್ಲಿ ಭಾಗವಹಿಸುವವರು ಇಲ್ಲಿ ನೀಡಲಾಗಿರುವ ಕ್ಯೂಆರ್ ಕೋಡ್ ಲಿಂಕ್‌ನಲ್ಲಿ ದಮಾ.09ರ ಸಂಜೆ 04-00 ಗಂಟೆಯೊಳಗೆ ರಿಜಿಸ್ಟರ್ ಮಾಡಿಕೊಳ್ಳುವುದು‌ ಕಡ್ಡಾಯವಾಗಿರುತ್ತದೆ.ದಾವಣಗೆರೆ ನಗರದಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಮಾ‌10 ರಂದು ಬೆಳಗ್ಗೆ 06-00 ಗಂಟೆಗೆ ಮೆರಾಥಾನ್ ಚಾಲನೆ ನೀಡಲಾಗುವುದು.

ವಿಜೇತರಿಗೆ ಬಹುಮಾನ:10,000 ಮೀ ಮೆರಾಥಾನ್ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಮೊದಲ 03 ಸ್ಪರ್ದೆಗಳಿಗೆ ನಗದು ಬಹುಮಾನ ನೀಡಲಾಗುತ್ತದೆ. ಅಂದರೆ- ಮೊದಲ ಬಹುಮಾನ 10,000/- ರೂಗಳು, ಎರಡನೇ ಬಹುಮಾನ 5000/- ರೂಗಳು, ಮೂರನೇ ಬಹುಮಾನ 3000/- ರೂಗಳು ಆಗಿರುತ್ತದೆ.

5000ಮೀ ಮೆರಾಥಾನ್ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಮೊದಲ 03 ಸ್ಪರ್ದೆಗಳಿಗೆ ನಗದು ಬಹುಮಾನ ನೀಡಲಾಗುತ್ತದೆ. ಅಂದರೆ- ಮೊದಲ ಬಹುಮಾನ 5000/- ರೂಗಳು, ಎರಡನೇ ಬಹುಮಾನ 3000/- ರೂಗಳು, ಮೂರನೇ ಬಹುಮಾನ 2000/- ರೂಗಳು ಆಗಿರುತ್ತದೆ.

ಮೆರಾಥಾನ್ ಓಟದಲ್ಲಿ ಸ್ಪರ್ಧಿಸುವವರ ಗಮನಕ್ಕೆ:
“10ಕೆ ಮ್ಯಾರಥಾನ್ ಹಾಗೂ 5ಕೆ ಮ್ಯಾರಥಾನ್ ಪೊಲೀಸರೊಂದಿಗೆ ಓಟ ಸ್ಪರ್ಧೆ” ಯಲ್ಲಿ ಭಾಗವಹಿಸುವವರು ಕಡ್ಡಾಯವಾಗಿ 18 ವರ್ಷ ಮೇಲ್ಪಟ್ಟ ವಯಸ್ಕರಾಗಿರಬೇಕು, ಯಾವುದೇ ಆರೋಗ್ಯದ ಸಮಸ್ಯೆಗಳು ಹೊಂದಿರಬಾರದು.

10ಕೆ ಮೆರಾಥಾನ್ ಓಟದ ಮಾರ್ಗ: ಜಿಲ್ಲಾ ಕ್ರೀಡಾಂಗಣದಿಂದ – ಡೆಂಟಲ್ ಕಾಲೇಜ್ ರಸ್ತೆ – ಗುಂಡಿ ವೃತ್ತ – ಶಾಮನೂರು ರಸ್ತೆ – ಲಕ್ಷ್ಮೀ ಪ್ಲೋರ್ ಮಿಲ್ ವೃತ್ತ ಮೂಲಕ ಬಾಪೂಜಿ ಬ್ಯಾಂಕ್ ಸಮುದಾಯ ವೃತ್ತ – ಶಾರದಾಂಭ ವೃತ್ತ ಮೂಲಕ ಸಾಗಿ ಕರ್ನಲ್ ರವೀಂದ್ರನಾಥ್ (ಕ್ಲಾಕ್ ಟವರ್ ವೃತ್ತ) ವೃತ್ತದ ಮೂಲಕ ನೇರವಾಗಿ ಸಂಗೋಳ್ಳಿ ರಾಯಣ್ಣ ವೃತ್ತ ತಲುಪಿ ಅಲ್ಲಿಂದ ಬಲ ತಿರುವು ಪಡೆದು ನೇರವಾಗಿ ಹಳೆ ಪಿಬಿ ರಸ್ತೆಯಲ್ಲಿ ಅರುಣ ವೃತ್ತ(ಚೆನ್ನಮ್ಮ ವೃತ್ತ) ಮೂಲಕ ಸಾಗಿ ಎಂ.ಜಿ ವೃತ್ತದಿಂದ ಬಲ ತಿರುವು ಪಡೆದುಕೊಂಡು ಜಯದೇವ ವೃತ್ತ ಮೂಲಕ ಸಾಗಿ ವಿದ್ಯಾರ್ಥಿ ಭವನ ಜಂಕ್ಷನ್ ಮೂಲಕ ಸಾಗಿ – ಕೆಟಿಜೆ ನಗರ 16 ನೇ ಕ್ರಾಸ್ ಮುಂಭಾಗ ಬಾಪೂಜಿ ಆಸ್ಪತ್ರೆ ರಸ್ತೆ ಬಳಿ ಬಲ ತಿರುವ ಪಡೆದುಕೊಂಡು ಜಿಲ್ಲಾ ಕ್ರೀಡಾಂಗಣದ ಮುಖ್ಯದ್ವಾರದ ಒಳಗಡೆ ಬರುವುದು.

5ಕೆ ಮೆರಾಥಾನ್ ಓಟದ ಮಾರ್ಗ : ಜಿಲ್ಲಾ ಕ್ರೀಡಾಂಗಣದಿಂದ ಆರಂಭವಾಗಿ ಹದಡಿ ರಸ್ತೆಯ ಮುಖ್ಯದ್ವಾರದ ಮೂಲಕ ಸಾಗಿ ಡಿ.ಆರ್.ಆರ್ ಕಾಲೇಜ್ ವೃತ್ತ ಮೂಲಕ ಸಾಗಿ ಶಾಮನೂರು ಪಾರ್ವತಮ್ಮ ಕಲ್ಯಾಣ ಮಂಟಪದ ಬಳಿ ಬಲಗಡೆ ತಿರುವು ಪಡೆದುಕೊಂಡು ನೇರವಾಗಿ ಸಾಗಿ ಕಾಫಿಡೇ ವೃತ್ತ ಮೂಲಕ ನೂತನ್ ಕಾಲೇಜ್ ರಸ್ತೆ ಮಾರ್ಗವಾಗಿ ನೂತನ್ ಕಾಲೇಜ್ ಬಳಿ ಮುಂಭಾಗ ಬಲ ತಿರುವು ಪಡೆದು ಆಂಜನೇಯ ಬಡಾವಣೆಯ 15ನೇ ಕ್ರಾಸ್ ಎಡ ತಿರುವು ಪಡೆದು ನೇರವಾಗಿ ಸಂಜೀವಿನಿ ನರ್ಸಿಂಗ್ ಕಾಲೇಜ್ ಬಳಿ ಬಲ ತಿರುವು ಪಡೆದು ಆಂಜನೇಯ ದೇವಸ್ಥಾನ ಮಾರ್ಗವಾಗಿ ಸಾಗಿ ಮೆಡಿಕಲ್ ಬಾಯ್ಸ್ ಹಾಸ್ಟೆಲ್ ರಸ್ತೆ ಮೂಲಕ ಸಾಗಿ ಡೆಂಟಲ್ ಕಾಲೇಜ್ ರಸ್ತೆ ತಲುಪುವುದು ಅಲ್ಲಿಂದ ಎಡ ತಿರುವು ಪಡೆದುಕೊಂಡು ಯುಬಿಡಿಟಿ ಕಾಲೇಜ್ ಬಳಿ ಬಲ ತಿರುವು ಪಡೆದುಕೊಂಡು ಎಆರ್‌ಜಿ ಕಾಲೇಜ್ ರಸ್ತೆ ಮಾರ್ಗವಾಗಿ ಸಾಗಿ ನೇರವಾಗಿ ಹದಡಿ ರಸ್ತೆ ತಲುಪುವುದು ನಂತರ ಎಡ ತಿರುವು ಪಡೆದುಕೊಂಡು ಜಿಲ್ಲಾ ಕ್ರೀಡಾಂಗಣದ ಹದಡಿ ರಸ್ತೆಯ ಭಾಗದ ಮುಖ್ಯದ್ವಾರದ ಒಳಗಡೆ ಬರುವುದು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top