ದಾವಣಗೆರೆ: ಸ್ಪೆಷಲ್ ಆರ್‌ಎಸ್‌ಐ (ಕೆಎಸ್‌ಆರ್‌ಪಿ) ಮತ್ತು ಐಆರ್‌ಬಿ (ಮಹಿಳಾ &ಪುರುಷ ಸೇವಾ ನಿರತ) ಹುದ್ದೆಗಳ ನೇಮಕಾತಿ ಸಂಬಂಧ ಅಭ್ಯರ್ಥಿಗಳಿಗೆ ಸಹಿಷ್ಣುತೆ ಮತ್ತು ದೇಹದಾರ್ಢ್ಯತೆ ಪರೀಕ್ಷೆಗಳನ್ನು ಮೇ 6 ರಿಂದ 12ರವರೆಗೆ ಒಟ್ಟು 6 ದಿನ ಕಾಲ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ.
ಎಲ್ಲಾ ಅಭ್ಯರ್ಥಿಗಳು ಇಟಿ/ಪಿಎಸ್‌ಟಿ ಪ್ರವೇಶ ಪತ್ರವನ್ನು ಇಲಾಖೆಯ ವೆಬ್‌ಸೈಟ್ ವಿಳಾಸ www.ksp.gov.in ರಿಂದ ಡೌನ್‌ಲೋಡ್ ಮಾಡಿಕೊಂಡು, ಕರೆ ಪತ್ರ ಮತ್ತು ಅಧಿಸೂಚನೆಯಲ್ಲಿ ತಿಳಿಸಿರುವಂತೆ ಕಡ್ಡಾಯವಾಗಿ ಜನ್ಮ ದಿನಾಂಕದ ಮತ್ತು ಭಾವಚಿತ್ರ ಹೊಂದಿರುವ ಗುರುತಿನ ಮೂಲ ದಾಖಲೆ [ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ/ಹೈದರಾಬಾದ್-ಕರ್ನಾಟಕ ಅಭ್ಯರ್ಥಿ ಪ್ರಮಾಣ ಪತ್ರ, ಪ್ಯಾನ್ ಕಾರ್ಡ್, ಮಾಜಿ ಸೈನಿಕ ಅಭ್ಯರ್ಥಿ, ಪಿಡಿಪಿ ಪ್ರಮಾಣ ಪತ್ರ ಇತ್ಯಾದಿ]ಅವಶ್ಯಕ ಮೂಲದಾಖಲಾತಿಗಳೊಂದಿಗೆ ಆಯಾ ದಿನವೇ ಪರೀಕ್ಷೆಗಳಿಗೆ ನಿಗಧಿತ ಸಮಯ ಬೆಳಿಗ್ಗೆ: 06 ಗಂಟೆಗೆ ಸರಿಯಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ತಪ್ಪದೇ ಹಾಜರಾಗುವಂತೆ ಸೂಚಿಸಿದೆ.
ಅಭ್ಯರ್ಥಿಗಳು ನಿಗಧಿತ ದೈಹಿಕ ಪರೀಕ್ಷಾ ದಿನಾಂಕಗಳಂದು ಗೈರು ಹಾಜರಾದಲ್ಲಿ ಬೇರೆ ದಿನಾಂಕಗಳಂದು ಪರೀಕ್ಷೆಗೆ ಹಾಜರಾಗಲು ಯಾವುದೇ ವಿನಾಯಿತಿ/ಅನುಮತಿಯನ್ನು ನೀಡಲಾಗುವುದಿಲ್ಲವೆಂದು ಈ ಮೂಲಕ ತಿಳಿಸಲಾಗಿದೆ. ಅಲ್ಲದೇ ಪ್ರಸ್ತುತ ಕೋವಿಡ್ 4ನೇ ಅಲೆಯು ಹರಡುತ್ತಿರುವ ಹಿನ್ನಲೆಯಲ್ಲಿ ಅಭ್ಯರ್ಥಿಗಳು ಮಾಸ್ಕ್ ಮತ್ತು ಸಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿದೆ.



