ದಾವಣಗೆರೆ; ಜಿಲ್ಲಾ ಪೊಲೀಸ್ ನ ಶ್ವಾನ ದಳದ ಸ್ಫೋಟಕ ಪತ್ತೆ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸೌಮ್ಯ ಇಂದು ಅನಾರೋಗ್ಯ ಕಾರಣ ನಿಧನ ಹೊಂದಿದೆ. ನಗರದ ಡಿಎಆರ್ ಆವರಣದಲ್ಲಿ ಜಿಲ್ಲಾ ಪೊಲೀಸ್ ವತಿಯಿಂದ ಸರ್ಕಾರಿ ಗೌರವಗಳೊಂದಿಗೆ ಸೌಮ್ಯಳಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಗೌರವ ವಂದನೆ ಸಲ್ಲಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಆವರಣದಲ್ಲಿ ಶ್ವಾನದ ಮೃತದೇಹ ಇಟ್ಟು ಗಾಳಿಯಲ್ಲಿ ಗುಂಡು ಹಾರಿಸಿ ಸಕಲ ಸರ್ಕಾರಿ ಗೌರವಗಳೊಂದಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಇತ್ತೀಚೆಗೆ ಶ್ವಾನ ದಳದ ತುಂಗಾ ಸಾವಿನ ನಂತರ ಮತ್ತೊಂದು ಶ್ವಾನ ಸಾವನ್ನಪ್ಪಿದೆ. ಕೊಲೆ, ದರೋಡೆ ಪ್ರಕರಣಗಳ ಬೇಧಿಸಿದ್ದ ತುಂಗಾ ಅಕಾಲಿಕ ಸಾವಿಗೀಡಾಗಿತ್ತು. ಈಗ ಸೌಮ್ಯ ಕೂಡ ಸಾವನ್ನಪ್ಪಿದ್ದು, ಜಿಲ್ಲಾ ಪೊಲೀಸ್ ಶ್ವಾನ ದಳದ ಮತ್ತೊಂದು ಶ್ವಾನ ಕಳೆದುಕೊಂಡಂತಾಗಿದೆ.
ಪೊಲೀಸ್ ಇಲಾಖೆಗೆ ಹಲವು ಪ್ರಕರಣ ಪತ್ತೆ ಮಾಡಲು ಅತ್ಯುತ್ತಮ ಸೇವೆ ಸಲ್ಲಿಸಿದ ಸೌಮ್ಯ ಕಳೆದುಕೊಂಡಿದ್ದು, ಇಲಾಖೆಗೆ ತುಂಬಲಾರದ ನಷ್ಟ ಎಂದು ಎಸ್ಪಿ ಉಮಾ ಪ್ರಶಾಂತ್ ಹೇಳಿದರು. ಈ ಸಂದರಭದಲ್ಲಿ ವೇಳೆ ಡಿವೈಎಸ್ಪಿ, ಎಸ್ಐ, ಪೊಲೀಸ್ ಸಿಬ್ಬಂದಿ ಹಾಜರಿದ್ದರು. ಅವರೂ ಸಹ ಶ್ವಾನಕ್ಕೆ ಗೌರವ ಸಲ್ಲಿಸಿದರು.
#PoliceDog #Sowmya, #Davanagere #Police



