ದಾವಣಗೆರೆ: ಮಟ್ಕಾ ಜೂಜಾಟ ಆಡುತ್ತಿದ್ದ ಪ್ರತ್ಯೇಕ ಎರಡು ಗ್ಯಾಂಗ್ ಮೇಲೆ ಜಿಲ್ಲಾ ಪೊಲೀಸರು ದಾಳಿ ಮಾಡಿದ್ದು, ಒಟ್ಟು 6 ಆರೋಪಿಗಳ ಬಂಧಿಸಲಾಗಿದೆ. ಆರೋಪಿಗಳಿಂದ 1.26 ಲಕ್ಷ ನಗದು ಹಣ, ತಲಾ ಐದು ಬೈಕ್, ಮೊಬೈಲ್ ವಶಕ್ಕೆ ಪಡೆಯಲಾಗಿದೆ.
ಪ್ರಕರಣ01; ದಿನಾಂಕ:-14-10-2022 ರಂದು ಸಂಜೆ ಸಮಯದಲ್ಲಿ ದಾವಣಗೆರೆ ಗ್ರಾಮಾಂತರ ಉಪ-ವಿಭಾಗ ಸಹಾಯಕ ಪೊಲೀಸ್ ಅಧೀಕ್ಷಕಿ ಕನಿಕಾ ಸಿಕ್ರಿವಾಲ್ ಅವರಿಗೆ ದಾವಣಗೆರೆ ತಾಲ್ಲೂಕಿನ ಆವರಗೊಳ್ಳ ಗ್ರಾಮದಲ್ಲಿ ಅಕ್ರಮವಾಗಿ ಮಟ್ಕಾ ಜೂಜಾಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ತಮ್ಮ ಅಧಿಕಾರಿ ಸಿಬ್ಬಂದಿಗಳ ತಂಡದೊಂದಿಗೆ ಮೇಲೆ ದಾಳಿ ಮಾಡಿದ್ದು, ಓರ್ವ ಆರೋಪಿತನನ್ನು ದಸ್ತಗಿರಿ ಮಾಡಲಾಗಿದ್ದು, ಆರೋಪಿತನಿಂದ ಒಟ್ಟು 66,040/- ರೂ ನಗದು ಹಣ ಹಾಗೂ 01 ಮೊಬೈಲ್, 01 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಈ ಸಂಬಂಧ ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣ 02: ದಿನಾಂಕ:-15-10-2022 ರಂದು ದಾವಣಗೆರೆ ಗ್ರಾಮಾಂತರ ಉಪ-ವಿಭಾಗ ಸಹಾಯಕ ಪೊಲೀಸ್ ಅಧೀಕ್ಷಕಿ ಕನಿಕಾ ಸಿಕ್ರಿವಾಲ್ ಅವರಿಗೆ ಹರಿಹರ ನಗರದ ಬೆಂಕಿ ನಗರದಲ್ಲಿ ಅಕ್ರಮವಾಗಿ ಮಟ್ಕಾ ಜೂಜಾಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ತಮ್ಮ ಅಧಿಕಾರಿ ಸಿಬ್ಬಂದಿಗಳ ತಂಡದೊಂದಿಗೆ ಮೇಲೆ ದಾಳಿ ಮಾಡಿ ಜೂಜಾಟದಲ್ಲಿ ತೊಡಗಿದ್ದ 05 ಜನ ಆರೋಪಿತರನ್ನು ದಸ್ತಗಿರಿ ಮಾಡಲಾಗಿದ್ದು, ಆರೋಪಿತರಿಂದ ಒಟ್ಟು 59,8೦೦/- ರೂ ನಗದು ಹಣ ಹಾಗೂ ೦4 ಮೊಬೈಲ್‌ಗಳು, ೦4 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಈ ಸಂಬಂಧ ಹರಿಹರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ದಾಳಿಯಲ್ಲಿ ಕನಿಕಾ ಸಿಕ್ರಿವಾಲ್ ಐ.ಪಿ.ಎಸ್ ಸಹಾಯಕ ಪೊಲೀಸ್ ಅಧೀಕ್ಷಕರು ಗ್ರಾಮಾಂತರ ಉಪ ವಿಭಾಗ ದಾವಣಗೆರೆ ನೇತೃತ್ತದಲ್ಲಿ ಸಿಬ್ಬಂದಿಗಳಾದ ಕರಿಬಸಪ್ಪ, ಸೈಯದ್ ಗಫಾರ್, ತಿಮ್ಮಪ್ಪ, ಹನುಮಂತಪ್ಪ ಕವಾಡಿ ಭಾಗವಹಿಸಿಧದರು. ಎಸ್ ಪಿ ಸಿ.ಬಿ.ರಿಷ್ಯಂತ್ , ಹೆಚ್ಚುವರಿ ಎಸ್ ಪಿ ಆರ್.ಬಿ.ಬಸರಗಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.



