ದಾವಣಗೆರೆ: ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ಉಂಟು ಮಾಡುವ ಪೋಸ್ಟ್ , ನಕಲಿ ಸುದ್ದಿ ತಡೆಗೆ ಪೊಲೀಸ್ ಇಲಾಖೆ Public Eye ಎಂಬ ವಾಟ್ಸಾಪ್ ಗ್ರೂಪ್ ರಚನೆ ಮಾಡಿದ್ದು, ಈ ಮೂಲಕ ಕಣ್ಗಾವಲು ಇಟ್ಟಿದೆ.
ದಾವಣಗೆರೆ ಜಿಲ್ಲಾ ಪೊಲೀಸ್ ವತಿಯಿಂದ ಈಗಾಗಲೇ ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ತೆಗೆಎದುಕೊಳ್ಳಬೇಕಾದ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದು, ಸಾಮಾಜಿಕ ಸಾಮರಸ್ಯಕ್ಕೆ ದಕ್ಕೆ ಉಂಟು ಮಾಡುವ ಸಾಮಾಜಿಕ ಜಾಲತಾಣಗಳ ಫೊಸ್ಟ್ ಗಳು ಹಾಗು ನಕಲಿ ಸುದ್ದಿಗಳು ಹೆಚ್ಚಿನ ರೀತಿಯಲ್ಲಿ ಹರಿದಾಡಿ ಸಾಮಾಜಿಕ ಸ್ವಾಸ್ಥö್ಯವನ್ನು ಹಾಳು ಮಾಡುವಂತಹದನ್ನು ತಡೆಯುವ ನಿಟ್ಟಿನಲ್ಲಿ ದಾವಣಗೆರೆ ಜಿಲ್ಲಾ ಪೊಲೀಸ್ ನೂತನ ವ್ಯವಸ್ಥೆಯನ್ನು ಮಾಡಿದ್ದು ಅದುವೇ “Public Eye ” ವಾಟ್ಸಾಪ್ ಗ್ರೂಪ್ ಆಗಿದೆ.
ಈ ನೂತನ “Public Eye ” ವಾಟ್ಸಾಪ್ ಗ್ರೂಪ್ ಕ್ಯೂಆರ್ ಕೋಡ್ ಅನ್ನು ಉಪ ಪೊಲೀಸ್ ಮಹಾ ನಿರೀಕ್ಷಕ ಬಿ ರಮೇಶ್ ಬಿ ಇಂದು ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ದಾವಣಗೆರೆ ಜಿಲ್ಲಾ ಪೊಲೀಸ್ ಪರಿವೀಕ್ಷಣಾ ಕವಾಯತು ಸಮಯದಲ್ಲಿ ಬಿಡುಗಡೆ ಮಾಡಿದರು. ಈ ಸಂಧರ್ಭದಲ್ಲಿ ಪೊಲೀಸ್ ಅಧೀಕ್ಷಕ ಉಮಾಪ್ರಶಾಂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ ಎಂ ಸಂತೋಷ, ಜಿ ಮಂಜುನಾಥ ಉಪಸ್ಥಿತರಿದ್ದರು.
ಈ ವಾಟ್ಸಾಪ್ ಗ್ರೂಪ್ ರಚನೆಯ ಉದ್ದೇಶ ಏನು.?: ದಾವಣಗೆರೆ ಜಿಲ್ಲೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುವಂತಹ ಪೋಸ್ಟ್ ಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ನಕಲಿ ಸುದ್ದಿಗಳ ಬಗ್ಗೆ ಜನರು ಗೊಂದಲಕ್ಕೆ ಒಳಗಾಗಬಾರದು, ಸಾಮಾಜದ ಸ್ವಾಸ್ಥ್ಯ ಹಾಳಾಗಬಾರದು ಎಂದು ಈ“Public Eye ” ವಾಟ್ಸಾಪ್ ಗ್ರೂಪ್ ರಚನೆ ಮಾಡಲಾಗಿರುತ್ತದೆ.
ಕಾರ್ಯವೈಖರಿ ಏನು; ಸಾರ್ವಜನಿಕರು ಇಲ್ಲಿ ನೀಡಲಾಗಿರುವ ಕ್ಯೂಆರ್ ಕೋಡ್ ಅನ್ನು ಬಳಸಿ “Public Eye ” ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗುವುದು. ನಂತರ ತಮ್ಮ ಮೊಬೈಲ್ ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಅನುಮಾನಸ್ಪದ ಸುದ್ದಿಗಳನ್ನು ಹಾಗೂ ಸಾಮಾಜಿಕ ಸ್ವಾಸ್ಥö್ಯವನ್ನು ಹಾಳು ಮಾಡುವಂತಹ ಪೋಸ್ಟ್ಗಳನ್ನು ಒಬ್ಬರಿಂದ ಇನ್ನೋಬ್ಬರಿಗೆ ಶೇರ್ ಮಾಡುವ ಮೊದಲು ಈ “Public Eye ” ವಾಟ್ಸಾಪ್ ಗ್ರೂಪ್ ಗೆ ಶೇರ್ ಮಾಡುವುದು. ಆ ಸುದ್ದಿ ಬಗ್ಗೆ ಸತ್ಯಾಸತ್ಯತೆ ಬಗ್ಗೆ ತಿಳಿದುಕೊಳ್ಳುವುದು.
ಸಾರ್ವಜನಿಕರು “Public Eye ” ವಾಟ್ಸಾಪ್ ಗ್ರೂಪ್ ಗೆ ಹಾಕುವ ಅನುಮಾನಸ್ಪದ ಸುದ್ದಿಗಳನ್ನು, ಹಾಗೂ ಸಾಮಾಜಿಕ ಸ್ವಾಸ್ಥö್ಯವನ್ನು ಹಾಳು ಮಾಡುವಂತಹ ಪೋಸ್ಟ್ ಗಳನ್ನು ಜಿಲ್ಲಾ ಪೊಲೀಸ್ ಕಛೇರಿಯಲ್ಲಿರುವ ಸಾಮಾಜಿಕ ಜಾಲತಾಣಗಳ ನಿಗಾ ಘಟಕದಲ್ಲಿನ ತರಬೇತಿ ಪಡೆದ ಸಿಬ್ಬಂದಿಗಳು ಸಾರ್ವಜನಿಕರಿಂದ ಬರುವ ಪೋಸ್ಟ್ ಗಳನ್ನು ಪರಿಶೀಲಿಸಿ, ಅವಶ್ಯಕತೆ ಇದ್ದಲ್ಲಿ ಆ ಪೋಸ್ಟ್ ಗಳ ಸತ್ಯಾಸತ್ಯತೆ ಬಗ್ಗೆ ಅಧೀಕೃತ ಜಿಲ್ಲಾ ಪೊಲೀಸ್ ಸಾಮಾಜಿಕ ಜಾಲತಾಣಗಳ ಮೂಲಕ ಹಾಗೂ ಸದರಿ ““Public Eye ” ವಾಟ್ಸಾಪ್ ಗ್ರೂಪ್ ನಲ್ಲಿ ವಿವರಣೆ ನೀಡಲಾಗುವುದು.
“Public Eye ” ವಾಟ್ಸಾಪ್ ಗ್ರೂಪ್ ನಂಬರ್ 9480803208 ಆಗಿದ್ದು, ಸಾರ್ವಜನಿಕರು ಈ ಮೊಬೈಲ್ ನಂಬರಿಗೆ ತಮ್ಮ ಸ್ಥಳೀಯ ಮಟ್ಟದಲ್ಲಿ ನಡೆಯುವ ಕಾನೂನು ಉಲ್ಲಂಘನೆ ಹಾಗೂ ಕಾನೂನು ಬಾಹಿರ ಕೃತ್ಯಗಳಿಗೆ ಸಂಬಂಧಿಸಿದಂತೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಅನುಮಾನಸ್ಪದ ಸುದ್ದಿ, ಆಡಿಯೋ, ವಿಡಿಯೋ ಮತ್ತು ಪೋಟೋಗಳನ್ನು ದಾವಣಗೆರೆ ಜಿಲ್ಲಾ ಪೊಲೀಸ್ ನೊಂದಿಗೆ ಹಂಚಿಕೊಳ್ಳಿ. ಸಾಮಾಜಿಕ ಜಾಲತಾಣಗಳಿಂದ ಜಿಲ್ಲೆಯಲ್ಲಿ ಕಾನೂನು & ಸುವ್ಯವಸ್ಥೆ ಹಾಗೂ ಸಾಮಾಜದ ಶಾಂತಿ ಸುವ್ಯವಸ್ಥೆಗೆ ದಕ್ಕೆ ಬಾರದ ಹಾಗೆ ಕಾಪಾಡುವ ನಿಟ್ಟಿನಲ್ಲಿ ದಾವಣಗೆರೆ ಜಿಲ್ಲಾ ಪೊಲೀಸ್ ನೊಂದಿಗೆ ಕೈಜೋಡಿಸಿ, ಸಾಮಾಜಿಕ ಜಾಲತಾಣಗಳಿಂದ ಸಾಮಾಜದ ಸ್ವಾಸ್ಥ್ಯ ಕಾಪಾಡುವ ಜವಾಬ್ದಾರಿ ನಾಗರಿಕರಾಗಿ ನಡೆಯೋಣ ಎಂದು ಜಿಲ್ಲಾ ಪೊಲೀಸ್ ಈ ಮೂಲಕ ಕೋರುತ್ತದೆ.
ಕಾನೂನು ಉಲ್ಲಂಘನೆ ಹಾಗೂ ಕಾನೂನು ಬಾಹಿರ ಕೃತ್ಯಗಳಿಗೆ ಸಂಬಂಧಿಸಿದಂತೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಅನುಮಾನಸ್ಪದ ಸುದ್ದಿ, ಆಡಿಯೋ, ವಿಡಿಯೋ ಮತ್ತು ಪೋಟೋಗಳನ್ನು ದಾವಣಗೆರೆ ಜಿಲ್ಲಾ ಪೊಲೀಸ್ ನೊಂದಿಗೆ ಹಂಚಿಕೊಂಡವರ ಮಾಹಿತಿಯನ್ನು ಗುಪ್ತವಾಗಿ ಇಡಲಾಗುವುದು.