ದಾವಣಗೆರೆ: ರಾಷ್ಟ್ರೀಯ ಹೆದ್ದಾರಿ 48ರ ಬಾಡ ಕ್ರಾಸ್ ಬಳಿ ದರೋಡೆಗಿಳಿದಿದ್ದ ಖತರ್ನಾಕ್ ಗ್ಯಾಂಗ್ ನ್ನು ದಾವಣಗೆರೆ ಪೊಲೀಸರು ಲಾಕ್ ಮಾಡಿದ್ದಾರೆ. ಆರೋಪಿಗಳಿಂದ ನಗದು ಹಣ ಕೃತ್ಯಕ್ಜೆ ಬಳಸುದ ಆಟೋ, ಬೈಕ್ ಹಾಗೂ ಮೊಬೈಲ್ ವಶಕ್ಕೆ ಪಡೆಯಲಾಗಿದೆ.
ಆರೋಪಿಗಳಾದ 1)ರಾಘವೇಂದ್ರ.ಎಸ್ @ ರಾಜಾಹುಲಿ @ರಾಘು, ವಾಸ ಮಲ್ಲಶೆಟ್ಟಹಳ್ಳಿ ಗ್ರಾಮ, 2] ಹನುಮಂತ @ ಬೆಟ್ಟ, ವಾಸ- ಜಿ.ಎಂ ಕ್ಯಾಂಪ್, ಬಾಡಾ ಕ್ರಾಸ್, 3] ಮನು @ ಗುಂಡ, ವಾಸ ಹೊನ್ನೂರು ಗ್ರಾಮ, 4] ಪ್ರಮೋದ್ @ ಕುಂಟ, ವಾಸ ಅವರಗೆರೆ, ಪಿ.ಬಿ ರಸ್ತೆ, ದಾವಣಗೆರೆ ಹಾಗೂ 5) ಕಸ್ತೂರಿ, ವಾಸ ನಿಟುವಳ್ಳಿ, ದಾವಣಗೆರೆ ಪತ್ತೆ ಮಾಡಿ ಆರೋಪಿಗಳನ್ನು ಬಂಧಿಸಲಾಗಿದೆ.
ದರೋಡೆ ಮಾಡಿದ್ದ ಅಂದಾಜು 60,000/-ರೂ ಬೆಲೆ ಬಾಳುವ ಯಮಹಾ ಸ್ಕೂಟರ್, 10,000/-ರೂ ಬೆಲೆ ಬಾಳುವ ಮೊಬೈಲ್ ಪೋನ್ ಹಾಗೂ ಕೃತ್ಯಕ್ಕೆ ಬಳಸಿದ 50,000/-ರೂ ಬೆಲೆ ಬಾಳುವ ಹೊಂಡಾ ಯುನಿಕಾರ್ನ ಬೈಕ್ ಮತ್ತು 2,00,000/-ರೂ ಬೆಲೆ ಬಾಳುವ ಮಹೀಂದ್ರ ಆಟೋ ವಶಪಡಿಸಿಕೊಂಡಿದ್ದು, ತಲೆಮರಿಸಿಕೊಂಡಿರುವ ಉಳಿದ ಆರೋಪಿತರ ಪತ್ತೆಕಾರ್ಯ ಪ್ರಗತಿಯಲ್ಲಿದೆ.
ದಿನಾಂಕ: 12.03.2023 ರಂದು ಪಿರ್ಯಾದಿ ಷಣ್ಮುಖ ರವರು ಠಾಣೆಗೆ ಹಾಜರಾಗಿ ಸದರಿ ದಿನದಂದು ಬೆಳಗಿನ ಜಾವ 12.30 ಗಂಟೆಯಿಂದ 01.30 ಗಂಟೆ ಸಮಯದಲ್ಲಿ ದಾವಣಗೆರೆ ಬಾಡಾ ಕ್ರಾಸ್ ಎನ್.ಹೆಚ್-48 ಸರ್ವೀಸ್ ರಸ್ತೆಯಲ್ಲಿ ಯಾರೋ 06 ಜನ ಅಪರಿಚಿತರು ನನ್ನ ಮೇಲೆ ಹಲ್ಲೆ ಮಾಡಿ ನನ್ನ ಬಳಯಿದ್ದ ಮೊಬೈಲ್ ಪೋನ್, ಎ.ಟಿ.ಎಂ ಕಾರ್ಡ್‌ಗಳನ್ನು ಮತ್ತು ನನ್ನ ಕೆ.ಎ-17 ಇ.ಜೇಡ್-1519ನೇ ಸ್ಕೂಟರ್ ಅನ್ನು ನನ್ನಿಂದ ಕಿತ್ತುಕೊಂಡು ಹೋಗಿರುತ್ತಾರೆ ಅಂತಾ ದೂರನ್ನು ನೀಡಿದ್ದು, ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ಪ್ರಕರಣಗಳಲ್ಲಿ ಆರೋಪಿತರನ್ನು ಪತ್ತೆ ಮಾಡಲು ದಾವಣಗೆರೆ ನಗರ ಉಪ ವಿಭಾಗದ ಡಿವೈಎಸ್‌ಪಿ ಮಲ್ಲೇಶ್ ದೊಡ್ಡಮನಿ ಮಾರ್ಗದರ್ಶನದಲ್ಲಿ ತನಿಖಾಧಿಕಾರಿಯಾದ ಪ್ರಭಾವತಿ ಸಿ ಶೇತಸನದಿ ಪೊಲೀಸ್ ಇನ್ಸ್‌ಪೆಕ್ಟರ್ ವಿದ್ಯಾನಗರ ಪೊಲೀಸ್ ಠಾಣೆ, ಶಶಿಧರ್ ಯು.ಜೆ ಪೊಲೀಸ್ ಇನ್ಸ್‌ಪೆಕ್ಟರ್ ಕೆ.ಟಿ.ಜೆ ನಗರ ಪೊಲೀಸ್ ಠಾಣೆ, ಎಂ.ಎಸ್ ದೊಡ್ಡಮನಿ ಪಿ.ಎಸ್.ಐ, ರೇಣುಕಾ ಜಿ.ಎಂ ಪಿ.ಎಸ್.ಐ ವಿದ್ಯಾನಗರ ಠಾಣೆ ಹಾಗೂ ವಿದ್ಯಾನಗರ ಠಾಣೆಯ ಸಿಬ್ಬಂದಿಯನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು. ಕಾರ್ಯಾಚರಣೆ ನಡೆಸಿದ ತಂಡಕ್ಕೆ ಪೊಲೀಸ್ ಅಧೀಕ್ಷಕ ಸಿ.ಬಿ ರಿಷ್ಯಂತ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಬಿ ಬಸರಗಿ ಶ್ಲಾಘಿಸಿದ್ದಾರೆ.



