ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಕಲಿ ಬಂಗಾರದ ಬಿಲ್ಲೆ ಜಾಲ ಪತ್ತೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರಿಗೆ 22 ಲಕ್ಷ ವಂಚನೆ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸಂತೇಬೆನ್ನೂರು ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಬಂಧಿಸಿದಂತೆ ಆರೋಪಿ ದುರುಗಪ್ಪ (70) ಚನ್ನಗಿರಿ ನಗರದ ಎಸ್ ಬಿಆರ್ ಕಾಲೋನಿಯ ಬಸ್ ನಿಲ್ದಾಣ ಬಳಿ ವಶಕ್ಕೆ ಪಡೆದಿದ್ದಾರೆ. ಡಿವೈಎಸ್ ಪಿ ಎಸ್.ಸಂತೋಷ, ಸಿಪಿಐ ಮಹೇಶ್, ಪಿಎಸ್ ಐ ಶಿವರುದ್ರಪ್ಪ ಎಸ್.ಮೇಟಿ ಅವರನ್ನೊಳಗೊಂಡ ತಂಡ ದಾಳಿ ತಂಡ ದಾಳಿ ಮಾಡಿದೆ. ಈ ಪ್ರಕಣ ಭೇದಿಸಿದ ಪೊಲೀಸ್ ಸಿಬ್ಬಂದಿಗೆ ಎಸ್ ಪಿ ರಿಷ್ಯಂತ್, ಹೆಚ್ಚುವರಿ ಎಸ್ ಪಿ ಆರ್. ಬಿ ಬಸರಗಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.