ದಾವಣಗೆರೆ: ದಾಖಲೆ ಇಲ್ಲದೇ ಅಕ್ರಮವಾಗಿ ಸಾಗಿಸುತ್ತಿದ್ದ 1.47 ಕೊಟಿ ಹಣ ವಶಕ್ಕೆ ಪಡೆದ ಸಂಚಾರಿ ಪೊಲೀಸರು. ಅಜಾದ್ ನಗರ ಪೊಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕಲಬುರಗಿಯಿಂದ ದಾವಣಗೆರೆ ಕಡೆ ಸಾಗಿಸಲಾಗುತ್ತಿತ್ತು.
KA 39P8055 ನಂಬರ್ ನ ಕಾರಿನಿಂದ ಅಕ್ರಮವಾಗಿ ಹಣ ಸಾಗಿಸುತ್ತಿದ್ದ ಮಾಹಿತಿ ಲಭ್ಯವಾಗಿದೆ. ಕೆಆರ್ ರಸ್ತೆಯ ಶಾದಿ ಮಾಲ್ ಬಳಿ ಹಣ ವಶಕ್ಕೆ ಪಡೆಯಲಾಗಿದೆ. ಹಣ ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಹಣ ಎಲ್ಲಿಗೆ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ನೀಡದ ಹಿನ್ನಲೆ ಹಣ ವಶಕ್ಕೆ ಪಡೆಯಲಾಗಿದೆ. ಪೊಲೀಸರು ಮತ್ತು ತೆರಿಗೆ ಇಲಾಖೆ ಅಧಿಕಾರಿಗಳು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಇಂದು ಸಂಜೆ ದಾವಣಗೆರೆ ನಗರದ ಕೆ.ಆರ್. ರಸ್ತೆ ಗ್ಯಾಲಕ್ಸಿ ಶಾದಿ ಮಹಲ್ ಬಳಿ ಕರ್ತವ್ಯದಲ್ಲಿದ್ದ ಉತ್ತರ ಸಂಚಾರ ಪೊಲೀಸರು ವಾಹನ ತಪಾಸಣೆ & ಐ ಎಂ.ವಿ ಪ್ರಕರಣ ದಾಖಲಿಸುವಾಗ ಅನುಮಾನಾಸ್ಪದವಾಗಿ ಕಂಡು ಬಂದ ವಾಹನವನ್ನು ತಡೆದು ತಪಾಸಣೆ ಮಾಡಿದಾಗ ಕಾರಿನಲ್ಲಿ 03 ಬ್ಯಾಗ್ ಗಳಲ್ಲಿ ಹಣವು ಕಂಡುಬಂದಿದ್ದು , ಹಣದ ಬಗ್ಗೆ ದಾಖಲೆ ಕೇಳಿದಾಗ ಸರಿಯಾದ ಮಾಹಿತಿ ನೀಡದೆ ಇದ್ದು, ಈ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ, ಅನುಮಾನವಿದ್ದ ಮೇರೆಗೆ ಹೆಚ್ವಿನ ವಿಚಾರಣೆಗಾಗಿ ಅಜಾದ್ ನಗರ ಪೊಲೀಸ್ ಠಾಣೆಗೆ ಕರೆತಂದು ವಿಚಾರಿಸಲಾಗಿ ಕಾರಿನಲ್ಲಿದ್ದ ಬ್ಯಾಗ ಗಳಲ್ಲಿ 1 ಕೋಟಿ 47 ಲಕ್ಷ ರೂಪಾಯಿಗಳ ಬಗ್ಗೆ ಕಾರಿನಲ್ಲಿದ್ದ ಶ್ರೀಕಾಂತ್, 26 ವರ್ಷ, ಮಹೇಶ್, 23 ವರ್ಷ, ಬಿರಲಿಂಗ, 25 ವರ್ಷ ಕಾರಿನ ಚಾಲಕ, ಕಲಬುರಗಿ ವಾಸಿಗಳಾದ ಇವರುಗಳು ಕಲಬುರಗಿಯಿಂದ ದಾವಣಗೆರೆಗೆ ಹಣ ಸಾಗಿಸುತ್ತಿರುವುದಾಗಿ ತಿಳಿಸಿರುತ್ತಾರೆ. ಸರಿಯಾದ ದಾಖಲೆಗಳು ಇಲ್ಲದ ಕಾರಣ ಮುಂದಿನ ಕ್ರಮಕ್ಕಾಗಿ ತೆರಿಗೆ ಇಲಾಖೆಗೆ ನೀಡಲಾಗಿದೆ.