ದಾವಣಗೆರೆ; ನಿನ್ನೆ ರಾತ್ರಿ ಖಾಸಗಿ ಬಸ್ ಪಾದಚಾರಿ ಮೇಲೆ ಹರಿದ ಪರಿಣಾಮ ವ್ಯಕ್ತಿಯೊಬ್ಬ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ನಡೆದಿತ್ತು. ಈ ಭಯಾನಕ ದೃಶ್ಯ ಇದೀಗ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದವನ ಮೇಲೆ ಯಮ ರೂಪದಲ್ಲಿ ಹರಿದ ಬಸ್ ತಕ್ಷಣ ಮಾತ್ರದಲ್ಲಿ ಪ್ರಾಣ ತೆಗೆದಿದೆ. ಇಲ್ಲಿ ಬಸ್ ಚಾಲನಕ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.
ದಾವಣಗೆರೆಯಲ್ಲಿ ಕಳೆದ 10 ದಿನದ ಅಂತರದಲ್ಲಿ ಮೂರು ಸಾವು ಸಂಭವಿಸಿದ್ದು, ಮೇಲಿಂದ ಮೇಲೆ ಇಂತಹ ಘಟನೆಗಳು ಆಗುತ್ತಿರುವುದರಿಂದ ರೊಚ್ಚಿಗೆದ್ದ ಸಾರ್ವಜನಿಕರಿಂದ ಬಸ್ ಗಾಜು ಪುಡಿಪುಡಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಖಾಸಗಿ ಬಸ್ ಆರಾಧ್ಯ ಸ್ಟೀಲ್ ಕಂಪನಿಗೆ ಸೇರಿದ ಬಸ್ ಆಗಿದ್ದು, ನಗರದ ಅರುಣಾ ಟಾಕೀಸ್ ಸರ್ಕಲ್‌ನಲ್ಲಿ ಈ ಘಟನೆ ನಡೆದಿದೆ. ಬಾರ್‌ನಲ್ಲಿ ಕೆಲಸ ಮಾಡುತಿದ್ದ ಬಸಪ್ಪ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದರು



