ದಾವಣಗೆರೆ: ಪಂಚಮಸಾಲಿ ಸಮಾಜವನ್ನು 2A ಗೆ ಸೇರ್ಪಡೆ ಮಾಡುವ ಅವಕಾಶ ಮುಖ್ಯಮಂತ್ರಿಗಳಿಗಿದ್ದು, ಬೆಳಗಾವಿಯಲ್ಲಿ ಮಾತು ಕೊಟ್ಟಿರುವುದನ್ನು ಉಳಿಸಿಕೊಳ್ಳಲಿ. ಡಿಸೆಂಬರ್ 23 ರ ಒಳಗೆ ಆಡಳಿತಾತ್ಮಕ ನಿರ್ಣಯ ಕೈಗೊಂಡು, 2A ಮೀಸಲಾತಿ ನೀಡಬೇಕು ಎಂದು ಕೂಡಲಸಂಗಮ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಸರ್ಕಾರವನ್ನು ಆಗ್ರಹಿಸಿದರು.
ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಮ್ಮ ಸಮಾಜದ ಬಗ್ಗೆ ಯಾಕಿಷ್ಟು ನಿರ್ಲಕ್ಷ್ಯ ತೋರುತ್ತಿದ್ದಾರೆ ಗೊತ್ತಿಲ್ಲ. ನಾವು ಯಾವತ್ತು ನಿರಾಸೆಗೊಂಡಿಲ್ಲ, ನಮ್ಮ ಹೋರಾಟ ನಿರಂತರ. ಯಡಿಯೂರಪ್ಪ ಮಾತು ಕೊಟ್ಟಂತೆ ನೆರವೇರಿಸಲಿ. ನಾಳೆ ಸಭೆ ನಡೆಸಿ ಕೂಡಲ ಸಂಗಮದಿಂದ ಬೆಂಗಳೂರಿನ ವರೆಗೆ ಪಾದಯಾತ್ರೆಯ ದಿನಾಂಕ ಪ್ರಕಟಿಸಲಾಗುವುದು ಎಂದು ತಿಳಿಸಿದರು.
ನಮ್ಮ ಮಕ್ಕಳಿಗೆ ಅನುಕೂಲಕ್ಕಾಗಿ ಮೀಸಲಾತಿ ಹೋರಾಟ ಮಾಡುತ್ತೇವೆ. ಮೂರು ಹಂತಗಳಲ್ಲಿ ಹೋರಾಟ ನಡೆಸುತ್ತಿದ್ದೇವೆ. ಪಾದಯಾತ್ರೆ ಮೂರನೇ ಹಂತದ ಹೋರಾಟಕ್ಕೆ ಸಿದ್ದವಾಗಿದ್ದೇವೆ. ಹೀಗಾಗಿ ಮಾತು ಕೊಟ್ಟಂತೆ ಡಿ. 23ರೊಳಗೆ ಆಡಳಿತಾತ್ಮಕ ನಿರ್ಣಯ ಕೈಗೊಳ್ಳುವಂತೆ ಒತ್ತಾಯಿಸಿದರು.



