ಹರಹರ : ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಕೈಗೊಂಡಿರುವ ಪಾದಯಾತ್ರೆ ಹರಿಹರದಲ್ಲಿ ವಿವಿಧ ಕಲಾತಂಡಗಳಿಂದ ಅದ್ಧೂರಿ ಸ್ವಾಗತಿಸಲಾಯಿತು.
ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಶ್ರೀಗಳ ನೇತೃತ್ವದ ಕೈಗೊಂಡ ಪಾದಯಾತ್ರೆ ಗುರುವಾರ ಸಂಜೆ ತಾಲೂಕಿನ ಗಡಿಭಾಗವಾದ ಗುತ್ತೂರಿನ ಸತ್ಯ ಗಣಪತಿ ದೇವಸ್ಥಾನದ ಸಮೀಪ ನೂರಾರೂ ಮಹಿಳೆಯರ ಪೂರ್ಣ ಕುಂಭ ಹಾಗೂ ವಿವಿಧ ಕಲಾತಂಡಗಳಿಂದ ಸ್ವಾಗತಿಸಲಾಯಿತು.
ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಹಾಗೂ ಸ್ವಾಗತ ಸಮಿತಿಯ ದೀಟೂರು ಶೇಖಪ್ಪ ಹೂ ಮಾಲೆಯನ್ನು ಹಾಕುವ ಮೂಲಕ ಸ್ವಾಗತವನ್ನು ಕೋರಿದರು. ನಂತರ ಶ್ರೀಗಳು ಗಣೇಶನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಶಿವಮೊಗ್ಗ-ಹೊಸಪೇಟೆ ರಸ್ತೆಯ ಮೂಲಕ ಸಾಗಿದ ಮೆರವಣಿಗೆ ಜಾಗೃತಿ ಸಮಾವೇಶ ನಡೆಯುವ ನಗರದ ಗಾಂಧಿ ಮೈದಾನಕ್ಕೆ ಬಂದು ತಲುಪಿದರು.
ಶ್ರೀಗಳನ್ನು ಸ್ವಾಗತಿಸಲು ಮದ್ಯಾಹ್ನದಿಅಮದ ತಾಲೂಕಿನ ಹಾಗೂ ಅಕ್ಕ ಪಕ್ಕದ ವಿವಿಧ ಜಿಲ್ಲೆಗಳಿಂದ ಪಂಚಮಸಾಲಿ ಸಮಾಜದವರು ಟ್ರ್ಯಾಕ್ಟರ್, ಬೈಕ್, ಲಾರಿ, ಬಸ್ಸು, ಕಾರುಗಾಲಲ್ಲಿ ಹರಿಹರಕ್ಕೆ ಆಗಮಿಸಿದ್ದರು.ಪಾದಯಾತ್ರೆಯಲ್ಲಿ ಶ್ರೀಗಳೊಂದಿಗೆ ಆಗಮಿಸಿದ ಸಾವಿರಾರೂ ಭಕ್ತರಿಗೆ ರಸ್ತೆಯೂದ್ದಕ್ಕೂ ಪಾನಿಯ ಮತ್ತು ಮಜ್ಜಿಗೆ ವಿತರಣೆ ಮಾಡುತ್ತಿದ್ದರು.
ಮೆರವಣಿಗೆಯಲ್ಲಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, ಮಾಜಿ ಶಾಸಕ ಎಚ್.ಎಸ್ ಶಿವಶಂಕರ್, ಸಮಾಜದ ಮುಖಂಡರಾದ ಎಂ.ಜಿ ಪರಮೇಶ್ವರ ಗೌಡ, ಮಂಜುನಾಥ್ ದೇಸಾಯಿಹೊಸಳ್ಳಿ ನಾಗಪ್ಪ, ಗೌಡ್ರುಪುಟ್ಟಪ್ಪ, ನೆಲ್ಲಿ ಬಸವರಾಜ್, ಕತ್ತಲಗೆರೆ ರಾಜು,ಜಿ. ನಂಜಪ್ಪ, ಕಲ್ಲಯ್ಯ, ಕಮಲಾಪುರದ ಶಿವನಗೌಡ, ಪ್ರೇಮ್ ಕುಮಾರ್, ಶೇಖರಗೌಡ ಪಾಟೀಲ್, ಬಸವರಾಜ್ ಪೂಜಾರ್, ಕುಮಾರ್ ಹೊಳೆಸಿರಿಗೆರೆ, ನಗರಸಭೆ ಸದಸ್ಯ ಪಿ.ಎನ್ ವಿರುಪಾಕ್ಷ, ಫೈನಾನ್ಸ್ ಮಂಜುನಾಥ್, ಚೂರಿ ಜಗದಿಶ್, ಸುರೇಶ್ ಹಾದಿಮನಿ, ಲತಾ ಕೊಟ್ರೇಶ್, ರಾಗಿಣಿ ಪ್ರಕಾಶ್, ಜಯ್ಯಮ್ಮ, ಉಮಾ, ಗಾಯತ್ರಮ್ಮ, ರುದ್ರಮ್ಮ, ನೀಲಮ್ಮ ಹಾಗೂ ಸಾವಿರಾರು ಮತ್ತಿತರರಿದ್ದರು.