ದಾವಣಗೆರೆ: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹಾಗೂ ವಿವಿಧ ನಿಗಮ, ಮಂಡಳಿ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆಯಲ್ಲಿ (Under the outsourced) ಸೇವೆ ಸಲ್ಲಿಸುತ್ತಿರುವ ನೌಕರರು (Employees), ಕಾರ್ಮಿಕರಿಗೆ (Workers) ವೇತನ ಪಾವತಿ ಮತ್ತು ಕಾನೂನಾತ್ಮಕವಾಗಿ ನೀಡಬೇಕಾದ ಸೌಲಭ್ಯಗಳನ್ನು ಒದಗಿಸುವ ಸಲುವಾಗಿ ದಾವಣಗೆರೆ ಜಿಲ್ಲಾ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಹಕಾರ ಸಂಘ ನಿಗಮವನ್ನು ನೂತನವಾಗಿ ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ. ತಿಳಿಸಿದ್ದಾರೆ.
ಅನಧಿಕೃತ ಬಡಾವಣೆ ನಿವೇಶನ, ಕಟ್ಟಡಗಳಿಗೆ ಬಿ-ಖಾತೆ ನೀಡಲು ಸರ್ಕಾರ ನಿರ್ಧಾರ; ಇ-ಖಾತೆ, ಎ ಖಾತೆಗೆ ಯಾವ ದಾಖಲೆ ಅಗತ್ಯ
ಈಗಾಗಲೇ ವಿವಿಧ ಸಂಸ್ಥೆಗಳ ಮೂಲಕ ಹೊರಗುತ್ತಿಗೆಯಡಿ ಟೆಂಡರ್ (Tender) ಮೂಲಕ ಸೇವೆಯನ್ನು ಸಲ್ಲಿಸಲಾಗುತ್ತಿದ್ದು ಈ ಎಲ್ಲಾ ಹೊರಗುತ್ತಿಗೆ ನೌಕರರು ಇನ್ನು ಮುಂದೆ ದಾವಣಗೆರೆ ಜಿಲ್ಲಾ ಕಾರ್ಮಿಕರ ಕ್ಷೇಮಾಭಿವೃದ್ದಿ ಸಹಕಾರ ಸಂಘದಡಿಯಲ್ಲಿ ಕೆಲಸ ನಿರ್ವಹಿಸುವರು. ಈ ನೌಕರರಿಗೆ ಜಿಲ್ಲಾ ಸಂಘದಿಂದಲೇ ನೇರವಾಗಿ ವೇತನ (Direct pay) ಹಾಗೂ ಇತರೆ ಸೌಲಭ್ಯಗಳನ್ನು ನೀಡಲಾಗುತ್ತದೆ. ಹೊರಗುತ್ತಿಗೆ ನೌಕರರು ಈ ಸಹಕಾರ ಸಂಘದ ಸದಸ್ಯರಾಗಿರುವರು. ಆದ್ದರಿಂದ ಹೊರಗುತ್ತಿಗೆ ನೌಕರ ಸಿಬ್ಬಂದಿಯವರು ಸಂಘದ ಸದಸ್ಯತ್ವ ಪಡೆಯಬಹುದಾಗಿದ್ದು ತಮ್ಮ ಇಲಾಖೆ ಮುಖ್ಯಸ್ಥರುಗಳಿಂದ ಅರ್ಜಿ ಪಡೆದು ನೋಂದಣಿ ಮಾಡಿಕೊಳ್ಳಲು ತಿಳಿಸಿದ್ದಾರೆ.
ಗ್ರಾಮೀಣ ಅಂಚೆ ಸೇವಕರ ನೇಮಕಾತಿಗೆ ಅರ್ಜಿ ಆಹ್ವಾನ
ರಾಜ್ಯದಲ್ಲಿ ವಿದ್ಯುತ್ ಕೊರತೆ ಇಲ್ಲ;
ಕೃಷಿಗೆ 7 ತಾಸು ವಿದ್ಯುತ್ ಪೂರೈಕೆ-ಸೋಲಾರ ವಿದ್ಯುತ್ ಉತ್ಪಾದನೆಗೆ ಒತ್ತು; ಇಂಧನ ಸಚಿವ ಜಾರ್ಜ್