ದಾವಣಗೆರೆ: ದಾವಣಗೆರೆ ವಿಶ್ವ ವಿದ್ಯಾಲಯದ ಸಿಂಡಿಕೇಟ್ ಪ್ರಾಧಿಕಾರಕ್ಕೆ ನೂತನ ನಾಮನಿರ್ದೇಶಿತ ಸದಸ್ಯರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಈ ಸಂಬಂಧ ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಯವರು ಅಧಿಸೂಚನೆ ಹೊರಡಿಸಿದ್ದಾರೆ.
ಕರ್ನಾಟಕ ರಾಜ್ಯ ವಿಶ್ವ ವಿದ್ಯಾಲಯಗಳ ಅಧಿನಿಯಮ 2000ರ ಪ್ರಕರಣ 28(1)(ಜಿ)ರಡಿ ಹಾಗೂ ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ಅಧಿನಿಯಮ 2000ರ ಪ್ರಕರಣ 39(1) ಅಡಿ ದಾವಣಗೆರೆ ವಿಶ್ವವಿದ್ಯಾಲಯದ ಸಿಂಡಿಕೇಟ್ ಪ್ರಾಧಿಕಾರಕ್ಕೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸರ್ಕಾರವು ನಾಮನಿರ್ದೇಶನ ಮಾಡಿ ಆದೇಶ ಹೊರಡಿಸಿದೆ.
ನಾಮನಿರ್ದೇಶಿತ ಸದಸ್ಯರ ಪಟ್ಟಿ
- ಡಾ.ಜಿ.ಕೆ ಪ್ರೇಮ, ಚಿತ್ತಯ್ಯನಹಟ್ಟಿ, ಹೊಸದುರ್ಗ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ- ಎಂಎ, ಪಿಹೆಚ್.ಡಿ- ಮಹಿಳೆ
- ದ್ಯಾಮಪ್ಪ, ಬೆಂಚಕಟ್ಟೆ, ಜಗಳೂರು ತಾಲ್ಲೂಕು – ಎಂಎ, ಇಂಗ್ಲೀಷ್ – ಪರಿಶಿಷ್ಟ ಜಾತಿ
- ಶಬೀರ್ ಆಲಿಖಾನ್, ನರಸರಾಜ್ ಪೇಟೆ, ದಾವಣಗೆರೆ – ಬಿಎಸ್ಸಿ, ಅಲ್ಪ ಸಂಖ್ಯಾತ
- ತಿಪ್ಪೇಸ್ವಾಮಿ ಹೆಚ್, ಚಳ್ಳಕೆರೆ, ಚಿತ್ರದುರ್ಗ – ಎಂಪಿಇಡಿ, ಎಂಫಿಲ್, ಎನ್ ಎಸ್, ಎನ್‌ಐಎಸ್, ಡಿಪ್ಲೋಮಾ(ಪಿಹೆಚ್ ಡಿ) – ಹಿಂದುಳಿದ ವರ್ಗ
- ಪ್ರಶಾಂತ್ ಆರ್.ಟಿ, ದಾವಣಗೆರೆ – ಡಿಪ್ಲೋಮಾ ( ಇ ಅಂಡ್ ಸಿ), ಬಿಎಸ್ಸಿ – ಸಾಮಾನ್ಯ
- ಡಾ.ಪ್ರಶಾಂತ್ ಎನ್ ಸಿ, ದಾವಣಗೆರೆ- ಎಂಬಿಎ, ಪಿಹೆಚ್.ಡಿ – ಸಾಮಾನ್ಯ
ಸಿಂಡಿಕೇಟ್, ಪ್ರಾಧಿಕಾರಗಳ ಪದನಿಮಿತ್ತ ಸದಸ್ಯರನ್ನು ಹೊರತುಪಡಿಸಿ ಉಳಿದ ಸದಸ್ಯರ ಪದಾವಧಿಯನ್ನು ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ, 2000ರ ಪ್ರಕರಣ 38 ರಲ್ಲಿ 03 ವರ್ಷಗಳಿಗೆ ಗೊತ್ತುಪಡಿಸಲಾಗಿದೆ.
Next Read: ಶನಿವಾರ-ರಾಶಿ ಭವಿಷ್ಯ ನವೆಂಬರ್-23,2024 »