Connect with us

Dvgsuddi Kannada | online news portal | Kannada news online

ತಾಂತ್ರಿಕ ದೋಷ ಕಾರಣದಿಂದ ಹೊಸ BPL ಕಾರ್ಡ್ ಗೆ ಅರ್ಜಿ ಸಲ್ಲಿಸಲು ಇಂದು ಅವಕಾಶವಿಲ್ಲ; ಮುಂದೆ ಹೊಸ ದಿನಾಂಕ ಪ್ರಕಟಿಸುವುದಾಗಿ ಆಹಾರ ಇಲಾಖೆ ಘೋಷಣೆ…!!

ಪ್ರಮುಖ ಸುದ್ದಿ

ತಾಂತ್ರಿಕ ದೋಷ ಕಾರಣದಿಂದ ಹೊಸ BPL ಕಾರ್ಡ್ ಗೆ ಅರ್ಜಿ ಸಲ್ಲಿಸಲು ಇಂದು ಅವಕಾಶವಿಲ್ಲ; ಮುಂದೆ ಹೊಸ ದಿನಾಂಕ ಪ್ರಕಟಿಸುವುದಾಗಿ ಆಹಾರ ಇಲಾಖೆ ಘೋಷಣೆ…!!

ಬೆಂಗಳೂರು: ಹೊಸದಾಗಿ APL, BPL ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಇಂದು (ಡಿ.3) ಒಂದೇ ದಿನ ಆಹಾರ ಇಲಾಖೆ ಅವಕಾಶ ಕಲ್ಪಿಸಿತ್ತು. ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿತ್ತು.ರಾಜ್ಯಾಧ್ಯಂತ ನಾಳೆ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿತ್ತು. ಆದರೆ, ತಾಂತ್ರಿಕ ದೋಷದಿಂದ ಈ ಸೇವೆ ಇಂದು ಈ ಸೇವೆ ಲಭ್ಯ ಇರುವುದಿಲ್ಲ. ಮುಂದಿನ ದಿನಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಆಹಾರ‌ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಹೊಸ BPL, APL ಕಾರ್ಡ್ ಗೆ ಕರ್ನಾಟಕ ಒನ್, ಗ್ರಾಮ ಒನ್ ಹಾಗೂ ಬೆಂಗಳೂರು ಒನ್ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿತ್ತು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top